alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಧ್ವಜದ ಸಿದ್ಧತೆಯಲ್ಲಿ ಹುಬ್ಬಳ್ಳಿಯ ಬೆಂಗೇರಿ

flag of India

ಆಗಸ್ಟ್15 ಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ರಾಷ್ಟ್ರಧ್ವಜ ಹಾರಿಸಿ ಭಾರತ ಮಾತೆಗೆ ಕೈ ಮುಗಿಯುವ ಶುಭ ಗಳಿಗೆಗೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಘಟಕ ಸನ್ನದ್ಧವಾಗಿದೆ.

ದೇಶದ ಹಿರಿಮೆ ಗರಿಮೆಗಳಿಗೆ ಸಾಕ್ಷಿಯಾಗುವ ತಿರಂಗಾವನ್ನು ದೇಶದ ಮೂಲೆ ಮೂಲೆಗಳಿಗೆ ತಲುಪಿಸುವುದೇ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ. ಈ ಸಂಘಕ್ಕೆ 2006 ರಲ್ಲಿ ಬಿಐಎಸ್ (ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್) ಮಾನ್ಯತೆ ಕೂಡ ದೊರಕಿದೆ.

ದೆಹಲಿಯ ಕೆಂಪು ಕೋಟೆ, ಬೆಂಗಳೂರಿನ ವಿಧಾನಸೌಧ, ಸಂಘ- ಸಂಸ್ಥೆ, ಶಾಲಾ- ಕಾಲೇಜು ಎಲ್ಲ ಕಡೆಗಳಲ್ಲೂ ಬೆಂಗೇರಿಯಲ್ಲಿ ತಯಾರಾದ ರಾಷ್ಟ್ರಧ್ವಜವೇ ಹಾರುತ್ತದೆ. ಈಗಾಗಲೇ ರಾಷ್ಟ್ರಧ್ವಜದ ಮಾರಾಟ 1 ಕೋಟಿ ರೂ. ಗಳನ್ನು ದಾಟಿದೆ. ಕಳೆದ ವರ್ಷ 1.57 ಕೋಟಿ ರೂ. ವಹಿವಾಟಾಗಿತ್ತು. ಇನ್ನು ಆಗಸ್ಟ್ 15ರ ಒಳಗಾಗಿ ಲಕ್ಷಗಟ್ಟಲೆ ಧ್ವಜಗಳು ಮಾರಾಟವಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...