alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವ್ಯಕ್ತಿಯ ಕಣ್ಣಿನಿಂದ ಹೊರ ಬಂದಿದ್ದೇನು ಅಂತ ಗೊತ್ತಾದ್ರೆ ಗಾಬರಿಯಾಗುತ್ತೆ…!

ಕಣ್ಣಲ್ಲಿ ಧೂಳು, ಸಣ್ಣ ಹುಳ ಹೋದರೆ ಕಿರಿಕಿರಿ ಉಂಟಾಗುತ್ತದೆ. ಆದರೆ ಆ ವ್ಯಕ್ತಿಯ ಕಣ್ಣಲ್ಲಿದ್ದ ಆ ಪರಾವಲಂಬಿ ಜೀವಿ ನೋಡಿ ಸ್ವತಃ ವೈದ್ಯರೇ ಬೆಚ್ಚಿಬಿದ್ದಿದ್ದು, ಇದೀಗ ಕಣ್ಣಿನಿಂದ ಅದನ್ನು ತೆಗೆದ ಆ ವಿಡಿಯೊ ವೈರಲ್ ಆಗಿದೆ.

ಕುಂದಾಪುರದ ನೇತ್ರ ತಜ್ಞ ಡಾ. ಶ್ರೀಕಾಂತ್ ಶೆಟ್ಟಿ ಅವರ ಬಳಿಗೆ ಬಂದಿರುವ 60 ವರ್ಷದ ವ್ಯಕ್ತಿಯೊಬ್ಬ ಕಣ್ಣಿನಲ್ಲಿ ಉಂಟಾಗುತ್ತಿರುವ ತೊಂದರೆ ಬಗ್ಗೆ ವಿವರಿಸಿದ್ದಾರೆ. ಪರೀಕ್ಷೆಗೆಂದು ವ್ಯಕ್ತಿಯ ಕಣ್ಣನ್ನು ನೋಡಿದಾಗ, ಹುಳವಿರುವುದು ಗಮನಿಸಿದ್ದಾರೆ. ಆದರೆ ಆ ಹುಳ ಸುಮಾರು 15 ಸೆಂ.ಮೀ. ಉದ್ದವಿದೆ ಎನ್ನುವುದು ಕಣ್ಣಿನಿಂದ ಹೊರ ತಗೆದ ಬಳಿಕವೇ ಗೊತ್ತಾಗಿರುವುದು.

ಇಷ್ಟು ಉದ್ದದ ಹುಳ ಕಣ್ಣಿನಲ್ಲಿದ್ದರೂ, ವ್ಯಕ್ತಿ ಈ ಬಗ್ಗೆ ಗಮನ ಹರಿಸದಿರುವುದರಿಂದ ಕಿರಿಕಿರಿ ಹೆಚ್ಚಾಗಿದೆ. ಆರಂಭದಲ್ಲಿ ಸಣ್ಣ ಹುಳವೆಂದುಕೊಂಡು ಉಪಕರಣದ ಮೂಲಕ ಹೊರ ತೆಗೆಯಲು ಮುಂದಾದ ವೈದ್ಯರಿಗೆ ಸುಮಾರು 15 ಸೆಂ.ಮೀ. ನ ಆ ಹುಳವನ್ನು ತೆಗೆದಾಗ ಅಚ್ಚರಿಯೊಂದಿಗೆ ಗಾಬರಿಯಾಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದೀಗ ವೈರಲ್ ಆಗಿದೆ.

ಇಷ್ಟು ಉದ್ದದ ಹುಳದ ಬಗ್ಗೆ ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದರೆ, ತಜ್ಞರು ಈ ಹುಳವನ್ನು ವಕ್ಹೇರಿಯಾ ಬ್ಯಾನ್ರೊಫ್ತಿ ಎಂದು ಗುರುತಿಸಿದ್ದು, ಸೊಳ್ಳೆ ಕಡಿತದಿಂದ ಬರುವ ವೈರಸ್ ನಿಂದ ಇದು ವ್ಯಕ್ತಿ ಕಣ್ಣಿನಲ್ಲಿ ಹೊಕ್ಕಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...