alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ನೆನಪಿನಲ್ಲಿ ಬಡ ವಿದ್ಯಾರ್ಥಿನಿಯರ ಶುಲ್ಕ ಪಾವತಿಸಿದ ಕ್ಲರ್ಕ್…!

ಪೋಷಕರ ಮುಂದೆ ಮಕ್ಕಳು ಸಾವನ್ನು ಅಪ್ಪಿದ್ರೆ, ಪುತ್ರ ಶೋಕ ನಿರಂತರ ಎಂದು ಹೇಳ್ತಾರೆ. ಮಕ್ಕಳ ಸಾವನ್ನು ನೆನೆಸಿಕೊಂಡು ಕೂರದೆ, ಬೇರೆಯವರಿಗೆ ಒಳ್ಳೆಯದನ್ನು ಮಾಡುವ ಆಸೆ ಕಡಿಮೆ ಜನರಲ್ಲಿ ಇರುತ್ತದೆ. ಕಲಬುರಗಿಯ ಮಕಟಂಪುರುನ ಎಂಪಿಎಚ್ಎಸ್ ಸರ್ಕಾರಿ ಶಾಲೆಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ್ ಇಂತಹ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೌದು…..ಬಸವರಾಜ್ ರ ಪುತ್ರಿ ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ವರ್ಷ ಸಾವನ್ನಪ್ಪಿದ್ದರು. ಅವರ ನೆನಪಿನಲ್ಲಿ ಬಸವರಾಜ್, ಸುಮಾರು 45 ಬಡ ಹೆಣ್ಣು ಮಕ್ಕಳ ಫೀ ಕಟ್ಟುತ್ತಿದ್ದಾರೆ. ತಾವು ಕೆಲಸ ಮಾಡುವ ಶಾಲೆಯಲ್ಲಿ ಕಲೆಯುವ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಯರ ಶುಲ್ಕ ಪಾವತಿಸಿದ್ದಾರೆ.

ನನ್ನ ಮಗಳು ಬದುಕಿದ್ದರೆ ಅವಳಿಗೆ 50 ಸಾವಿರ ಫೀ ಕಟ್ಟುತ್ತಿದ್ದೆ. ಆದ್ರೆ, ಈಗ ಅವಳು ಇಲ್ಲ. ಅವಳ ನೆನಪಿನಲ್ಲಿ ಈ ಕಾರ್ಯ ಮಾಡುತ್ತಿರೋದಾಗಿ ಬಸವರಾಜ್ ಭಾವುಕರಾಗಿ ತಿಳಿಸಿದ್ದಾರೆ.

ಇವರಿಂದ ನೆರವು ಪಡೆದಿರುವ ಬಡ ವಿದ್ಯಾರ್ಥಿಗಳು, ಬಸವರಾಜ್ ಸರ್ ಮಾಡಿರೋ ಉಪಕಾರ ದೊಡ್ಡದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...