alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆ ಮರೆತ ಜನ, ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

accidents 741

ಬೆಂಗಳೂರು: ಊಹೆಗೂ ಮೀರಿದ ಭಯಾನಕ ಅಪಘಾತದಲ್ಲಿ ದೇಹವೇ ಎರಡು ತುಂಡಾದರೂ, ರಸ್ತೆ ಮಧ್ಯೆಯೇ ಗಂಟೆಗಟ್ಟಲೇ ಯುವಕನೊಬ್ಬ ನೆರವಿಗಾಗಿ ಅಂಗಲಾಚಿದ ಮನಕಲಕುವ ಘಟನೆ ನೆಲಮಂಗಲ ಸಮೀಪ ನಡೆದಿದೆ. 26 ವರ್ಷದ ಹರೀಶ್ ಮೃತಪಟ್ಟವರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕರಿಗೌಡನಹಳ್ಳಿ ಗ್ರಾಮದವರಾದ ಹರೀಶ್, ಬೆಂಗಳೂರಿನಲ್ಲಿ ಎಟಿಎಂ ಗಳಿಗೆ ಹಣ ತುಂಬುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಊರಿಗೆ ಮತದಾನ ಮಾಡಲು ಹೋಗಿದ್ದ ಹರೀಶ್ ಇಂದು ಬೆಳಿಗ್ಗೆ ಪಲ್ಸರ್ ಬೈಕ್ ನಲ್ಲಿ ಬೆಂಗಳೂರಿಗೆ ಹೊರಟಿದ್ದರು. ನೆಲಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತವೇ ನಡೆದಿದೆ. ಹರೀಶ್ ಬೈಕ್ ಗೆ ಹಿಂಬದಿಯಿಂದ ಲಾರಿ ಗುದ್ದಿದೆ.

ರಸ್ತೆಯಲ್ಲಿ ಹರೀಶ್ ಕೆಳಗೆ ಬಿದ್ದಿದ್ದು, ಅವರ ಮೇಲೆ 10 ಚಕ್ರದ ಲಾರಿ ಹರಿದಿದೆ. ಇದರಿಂದಾಗಿ ಹರೀಶ್ ದೇಹ ಸೊಂಟದಿಂದ ಮೇಲೆ ಮತ್ತು ಕೆಳಗೆ ಎರಡು ಭಾಗವಾಗಿದೆ. ದೇಹ ತುಂಡಾದ ಹರೀಶ್ ನೆರವಿಗೆ ಅಂಗಲಾಚಿದ್ದಾರೆ. ತಮ್ಮ ದೇಹ ತುಂಡಾಗಿದೆ. ನಾನು ಉಳಿಯುವ ಸಾಧ್ಯತೆಯಂತೂ ಇಲ್ಲ. ನನ್ನ ಅಂಗಾಂಗಗಳನ್ನಾದರೂ ತೆಗೆದುಕೊಳ್ಳಲು ಆಸ್ಪತ್ರೆಗೆ ಸೇರಿಸಿ ಎಂದೆಲ್ಲಾ ಹೇಳಿದ್ದಾರೆ. ಹರೀಶ್ ಹೀಗೆ ಸುಮಾರು ಮುಕ್ಕಾಲು ಗಂಟೆ ದಾರಿಯಲ್ಲೇ ಅರ್ಧ ದೇಹದೊಂದಿಗೆ ಬಿದ್ದು ಒದ್ದಾಡುತ್ತಿದ್ದರೂ ಯಾರೂ ಹತ್ತಿರಕ್ಕೆ ಹೋಗಿಲ್ಲ.

ವಾಹನಗಳೆಲ್ಲಾ ಅವರ ಪಕ್ಕದಲ್ಲೇ ಸಂಚರಿಸಿವೆ. ಜನ ಕೂಡ ದೇಹವೇ ಎರಡು ತುಂಡಾಗಿದ್ದ ಆ ಭೀಕರ ದೃಶ್ಯ ಕಂಡು ಭಯಗೊಂಡಿದ್ದಾರೆ. ಕೊನೆಗೆ ಯಾರೋ ಅಂಬುಲೆನ್ಸ್ ಗೆ ಫೋನ್ ಮಾಡಿದ್ದು, ಹರೀಶ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ವೈದ್ಯರಿಗೆ ಹರೀಶ್, ನನ್ನ ಅಂಗಾಂಗಳನ್ನು ಯಾರಿಗಾದರೂ ಕೊಡಿ ಎಂದು ಹೇಳಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಹೀಗೆ ದೇಹ ತುಂಡಾದರೂ ಸುಮಾರು ಒಂದು ಗಂಟೆ ಕಾಲ ಬದುಕಿದ್ದು, ವಿಸ್ಮಯಕಾರಿ ಘಟನೆಯೇ ಸರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...