alex Certify
ಕನ್ನಡ ದುನಿಯಾ       Mobile App
       

Kannada Duniya

ಜನಾರ್ಧನ ರೆಡ್ಡಿಗೆ ತಟ್ಟದ ನೋಟಿನ ಬಿಸಿ

palace-reddy

ಬೆಂಗಳೂರು: ಕಾಳಧನಕ್ಕೆ ಕಡಿವಾಣ ಹಾಕುವ ಸಲುವಾಗಿ, 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿದ್ದು, ಇಡೀ ದೇಶದಲ್ಲಿ ಹಂಗಾಮ ಸೃಷ್ಠಿಯಾಗಿದೆ.

ದೇಶದಲ್ಲಿ ಜನಸಾಮಾನ್ಯರೆಲ್ಲಾ ಬ್ಯಾಂಕ್, ಎ.ಟಿ.ಎಂ., ಪೋಸ್ಟ್ ಆಫೀಸ್ ಗಳ ಎದುರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ತಮ್ಮಲ್ಲಿರುವ ಅಲ್ಪಸ್ವಲ್ಪ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು, ಖಾತೆಗೆ ಹಣ ಜಮಾ ಮಾಡಲು, ಕಳೆದ 6 ದಿನಗಳಿಂದ ಸರದಿ ಸಾಲಿನಲ್ಲಿ ಜನ ಕಾಯುತ್ತಿದ್ದಾರೆ. ಇನ್ನು ಮಕ್ಕಳ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗದೇ ಜನಸಾಮಾನ್ಯರು ಪರಿತಪಿಸುವಂತಾಗಿದೆ.

ಮದುವೆ ಕಾರ್ಯಗಳಿಗೆ 5 ಲಕ್ಷ ರೂ.ಗಳವರೆಗೆ ಹಣ ಪಡೆಯಲು ಅವಕಾಶವಿದೆ ಎಂದು ಹೇಳಲಾಗಿದ್ದರೂ, ಇದು ಸಾಮಾನ್ಯ ಜನರಿಗೆ ದಕ್ಕುತ್ತಿಲ್ಲ. ಇದು ಸಾಮಾನ್ಯರ ಕತೆಯಾದರೆ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಗೆ ಯಾವುದೇ ನೋಟಿನ ಬಿಸಿ ತಟ್ಟಿಲ್ಲ. ಸುಮಾರು 100 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ಅದ್ಧೂರಿ ಮದುವೆ ಸಮಾರಂಭಕ್ಕೆ ಬೆಂಗಳೂರು ಅರಮನೆ ಮೈದಾನ ಸಿಂಗಾರಗೊಂಡಿದೆ.

ವೈಭವೋಪೇತ ಮದುವೆಗೆ ವಿಜಯನಗರ ಸಾಮ್ರಾಜ್ಯ, ಬಳ್ಳಾರಿ ಬಡಾವಣೆ, ಹಳ್ಳಿಗಾಡಿನ ಅದ್ಧೂರಿ ಸೆಟ್ ಗಳನ್ನು ಹಾಕಲಾಗಿದೆ. ನವೆಂಬರ್ 12 ರಿಂದ ಆರಂಭವಾಗಿರುವ ಮದುವೆ ಕಾರ್ಯಗಳು 16 ರ ವರೆಗೆ ನಡೆಯಲಿವೆ. ಈ ಮದುವೆಯಲ್ಲಿ ಬಾಲಿವುಡ್ ಸ್ಟಾರ್ ಶಾರುಕ್ ಖಾನ್, ಪ್ರಭುದೇವ ಅವರು ಕಾರ್ಯಕ್ರಮ ನೀಡಲಿದ್ದಾರೆ ಎನ್ನಲಾಗಿದ್ದು, ಮದುವೆಗೆ ಆಗಮಿಸುವ ಅತಿಥಿಗಳಿಗೆ 1500 ರೂಂಗಳನ್ನು 5 ಸ್ಟಾರ್ ಹೋಟೆಲ್ ಗಳಲ್ಲಿ ಬುಕ್ ಮಾಡಲಾಗಿದೆ.

ಜನ ಸಣ್ಣ ಮೊತ್ತದ ಹಣಕ್ಕೆ ಎಷ್ಟೆಲ್ಲಾ ಪರಿತಪಿಸುತ್ತಿರುವಾಗ, ಜನಾರ್ಧನ ರೆಡ್ಡಿ ಅವರಿಗೆ ನೋಟ್ ಎಫೆಕ್ಟ್ ಬಿಸಿ ತಟ್ಟದಿರುವುದು ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...