alex Certify
ಕನ್ನಡ ದುನಿಯಾ       Mobile App
       

Kannada Duniya

ಐಐಟಿ ಗೆ ಟೈಲರ್ ಪುತ್ರಿಯ ಎಂಟ್ರಿ

IIT 28

ಯಾದಗಿರಿ: ಐಐಟಿ ಪ್ರವೇಶ ಪಡೆಯುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಸಿನ ಮಾತು. ಆದರೆ, ಸತತ ಪರಿಶ್ರಮ, ಸಾಧಿಸುವ ಛಲವೊಂದಿದ್ದರೆ ಯಾವ ಗುರಿಯನ್ನಾದರೂ ತಲುಪಬಹುದು. ಅಂತಹ ಛಲದೊಂದಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ಸಾಧನೆ ಮಾಡಿದ್ದಾರೆ.

ಅವರೇ, ಯಾದಗಿರಿ ಜಿಲ್ಲೆ ಹುಣಸಗಿ ಸಮೀಪದ ಕೊಡೇಕಲ್ ಗ್ರಾಮದ ಪ್ರೇಮಾ ಭಜಂತ್ರಿ. ಕೊಡೇಕಲ್ ಗ್ರಾಮದಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ಸುಭಾಷ್ ಭಜಂತ್ರಿ ಅವರದು ಕಡು ಬಡತನದ ಕುಟುಂಬ. ಬಡತನದಲ್ಲಿಯೇ ಕಷ್ಟಪಟ್ಟು ಓದಿದ ಪ್ರೇಮಾ ಭಜಂತ್ರಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಪ್ರೇಮಾ, ಕೊಡೇಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ.

ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 5 ರಿಂದ 10 ನೇ ತರಗತಿ ಓದಿ, ಇಳಕಲ್ ನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾರೆ. ಇದೀಗ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಆ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...