alex Certify
ಕನ್ನಡ ದುನಿಯಾ       Mobile App
       

Kannada Duniya

ಸಡಗರ ಸಂಭ್ರಮದಿಂದ ಬಕ್ರೀದ್ ಆಚರಣೆ

ಮುಸ್ಲಿಂರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಇಂದು ಸಡಗರ ಸಂಭ್ರಮದಿಂದ ಆಚರಿಸಿದರು. ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಅಪ್ಪಿಕೊಂಡು ಶುಭಾಶಯ ಕೋರಿದರು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಭಕ್ತಿ ಭಾವದಿಂದ ಹಬ್ಬವನ್ನ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದು, ಅತ್ಯಂತ ಆಕರ್ಷವಾಗಿ ಕಂಡಿತು.

ತಮ್ಮ ತಮ್ಮ ನಗರ, ಪಟ್ಟಣ, ಗ್ರಾಮಗಳಲ್ಲಿ ಮುಂಜಾನೆಯೇ ಮಸೀದಿ ಈದ್ಗಾ ಮೈದಾನಗಳಿಗೆ ಸಾಮೂಹಿಕ ಪ್ರಾರ್ಥನೆ ನಡೆಸಿ, ಪರಸ್ಪರ ಶುಭಾಶಯ ಕೋರಿದ್ದು ಅಲ್ಲದೆ ಬೇರೆ ಧರ್ಮದ ಬಾಂಧವರೊಂದಿಗೂ ಕೂಡ ತಮ್ಮ ಸಂತೋಷ ಮತ್ತು ಅಭಿಮಾನವನ್ನು ಹಂಚಿಕೊಂಡಿದ್ದು, ವಿಶೇಷವಾಗಿತ್ತು.

ಹಲವು ರಾಜಕೀಯ ಪಕ್ಷಗಳ ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ತಾವು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾಶಯ ಹೇಳಿದರು.
ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಇದು ಒಂದು. ತ್ಯಾಗ ಬಲಿದಾನದ ಸಂಕೇತವೂ ಹೌದು. ಸಾಮಾಜಿಕ ಸೌಹಾರ್ದತೆ ಸಾರುವ, ಐಕ್ಯತೆ ವಾತಾವರಣ ಬಿಂಬಿಸುವ ಎಲ್ಲಾ ಸಮುದಾಯಗಳು ಸೇರಿಸಿಕೊಂಡು ಬಿನ್ನತೆ ಮರೆತು ಒಂದಾಗಿ ಆಚರಿಸುವ ಈ ಬಕ್ರೀದ್ ಒಂದು ವಿಶೇಷವೇ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...