alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯೊಂದಿಗೆ ಐಸ್ ಕ್ರೀಂ ಪಾರ್ಲರ್ ಗೆ ಬಂದಿದ್ದ ಅಷ್ಟೇ

boy-cute-friends-girl-ice-crea

ಮಂಗಳೂರು: ಮಂಗಳೂರಿನಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಯುವಕ, ಯುವತಿ ಜೊತೆಯಾಗಿದ್ದರೆ ಹಲವು ಕಣ್ಣುಗಳು ಗಮನಿಸುತ್ತಿರುತ್ತವೆ. ಅದರಲ್ಲಿಯೂ ಅನ್ಯ ಕೋಮಿನವರೂ ಜೊತೆಗಿದ್ದರೆ ಕೆಲವರು ದಾಳಿ ಮಾಡಿರುವ ಉದಾಹರಣೆ ಸಾಕಷ್ಟು ನಡೆದಿವೆ.

ಹೀಗೆ ಅನ್ಯ ಕೋಮಿಗೆ ಸೇರಿದ ಯುವಕ, ಯುವತಿ ಐಸ್ ಕ್ರೀಂ ಪಾರ್ಲರ್ ಗೆ ಜೊತೆಯಾಗಿ ಬಂದಿದ್ದ ಸಂದರ್ಭದಲ್ಲಿ, ಕೆಲವರು ದಾಳಿಗೆ ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳಾದ ಇಬ್ಬರೂ ಅನ್ಯ ಕೋಮಿಗೆ ಸೇರಿದವರಾಗಿದ್ದು, ಬೈಕ್ ನಲ್ಲಿ ತೊಕ್ಕೊಟ್ಟು ಸಮೀಪದ ಐಸ್ ಕ್ರೀಂ ಪಾರ್ಲರ್ ಗೆ ಬಂದಿದ್ದರು.

ಹೀಗೆ ಅನ್ಯ ಕೋಮಿನ ಯುವಕ, ಯುವತಿ ಜೊತೆಯಾಗಿ ಐಸ್ ಕ್ರೀಂ ಪಾರ್ಲರ್ ನಲ್ಲಿ ಇರುವ ಸುದ್ದಿ ತಿಳಿದ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ಮಾಡಲು ಪಾರ್ಲರ್ ಎದುರು ಗುಂಪುಗೂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಿಚಾರಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...