alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಡ್ಯದ ಮನೆ ತೆರವು ಮಾಡಿದ ಹಿಂದಿನ ‘ಕಾರಣ’ವನ್ನು ಕೊನೆಗೂ ಬಿಚ್ಚಿಟ್ಟ ರಮ್ಯಾ

ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ತಾವು ಮಾಡಿದ್ದ ಬಾಡಿಗೆ ಮನೆಯನ್ನು ರಾತ್ರೋ ರಾತ್ರಿ ತೆರವುಗೊಳಿಸಿದ್ದು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.

ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಬೆದರಿ ರಮ್ಯಾ, ಮನೆ ಖಾಲಿ ಮಾಡಿದ್ದಾರೆಂದು ಕೆಲವರು ಹೇಳಿದರೆ ಮತ್ತೆ ಹಲವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕಾರಣಕ್ಕಾಗಿ ಕಾಂಗ್ರೆಸ್, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಿದ್ದು, ತಮಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲವೆಂಬ ಹಿನ್ನಲೆಯಲ್ಲಿ ರಮ್ಯಾ ಮನೆ ತೆರವುಗೊಳಿಸಿದ್ದಾರೆಂದು ಹೇಳಿದ್ದರು.

ಇದೀಗ ಸ್ವತಃ ರಮ್ಯಾ ಅವರೇ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಾವು ಬಾಡಿಗೆ ಪಡೆದಿದ್ದ ಮನೆಯ ಮಾಲೀಕರು ಅದನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಹೇಳಿದ್ದರು. ಒಬ್ಬ ಜವಾಬ್ದಾರಿಯುತ ಬಾಡಿಗೆದಾರಳಾಗಿ ನಾನು ಕೊಟ್ಟ ಮಾತಿನಂತೆ ಮನೆ ಖಾಲಿ ಮಾಡಿದ್ದೇನೆ. ಆ ಮನೆಗೆ ಮಾಲೀಕರೇ ವಾಸಕ್ಕೆ ಬರುವ ಹಿನ್ನೆಲೆಯಲ್ಲಿ ನನಗೆ ಖಾಲಿ ಮಾಡಲು ತಿಳಿಸಿದ್ದರು ಎಂದು ರಮ್ಯಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...