alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಸಚಿವರ ರಾಸಲೀಲೆ ವಿಡಿಯೋ

hy-m-aಅಬಕಾರಿ ಸಚಿವ ಹೆಚ್. ವೈ. ಮೇಟಿ ಮಹಿಳೆಯೊಬ್ಬರೊಂದಿಗೆ ಸರ್ಕಾರಿ ಕಛೇರಿಯಲ್ಲೇ ನಡೆಸಿದ್ದಾರೆನ್ನಲಾದ ರಾಸಲೀಲೆಯ ಸಿಡಿ ಈಗ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಸಿಡಿ ಬಹಿರಂಗವಾದರೆ ರಾಜೀನಾಮೆ ನೀಡಲು ಸಿದ್ದರಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಹೆಚ್.ವೈ. ಮೇಟಿ ರಾಜೀನಾಮೆ ನೀಡಲಿದ್ದಾರೆಂಬ ಮಾತು ಕೇಳಿ ಬಂದಿದೆ.

ಬಳ್ಳಾರಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್ ರವರ ಬಳಿ ಈ ಮೊದಲು ಸಿಡಿ ಇತ್ತೆನ್ನಲಾಗಿದ್ದು, ಅದನ್ನು ಬಹಿರಂಗಪಡಿಸದಂತೆ ಸಚಿವ ಮೇಟಿ ಆಪ್ತರೆನ್ನಲಾದ ಕೆಲವರು ರಾಜಶೇಖರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆಂದು ಹೇಳಲಾಗಿತ್ತು.

ಸಚಿವರ ರಾಸಲೀಲೆಯ ಕುರಿತು ತಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ತಮ್ಮಲ್ಲಿವೆ ಎಂದು ಹೇಳಿಕೊಂಡಿದ್ದ ರಾಜಶೇಖರ್, ಮೇಟಿಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಎಐಸಿಸಿ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದರು. ಸಿಡಿ ಇದೆಯೇ ಇಲ್ಲವೋ ಎಂಬ ಗೊಂದಲಗಳು ಮೂಡಿದ್ದ ಮಧ್ಯೆ ಇದೀಗ 3 ನಿಮಿಷ 23 ಸೆಕೆಂಡುಗಳ ಕಾಲದ ರಾಸಲೀಲೆ ವಿಡಿಯೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಸಿಡಿಯ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...