alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯನ್ನೇ ಬದಲಿಸಿದ ಮಹಿಳೆ, ಕಾರಣ ಗೊತ್ತಾ…?

basava

ರಾಯಚೂರು: ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ಗಂಡನ ಹೆಸರನ್ನೇ ಬದಲಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಮಹಿಳೆಗೆ ಗ್ರಾಮೀಣ ಆಶ್ರಯ ವಸತಿ ಯೋಜನೆಯಡಿ ಮನೆ ನೀಡಲಾಗಿದ್ದು, ತಮ್ಮ ಪತಿಯ ಹೆಸರಿನೊಂದಿಗೆ 2005-06 ನೇ ಸಾಲಿನಲ್ಲಿ ಮನೆ ಪಡೆದುಕೊಂಡಿದ್ದ ಮಹಿಳೆ, 2010-11 ನೇ ಸಾಲಿನಲ್ಲಿ ಗಂಡನ ಹೆಸರನ್ನು ಬದಲಿಸಿ, ಬಸವ ವಸತಿ ಯೋಜನೆಯಡಿ ಮತ್ತೊಂದು ಮನೆ ಪಡೆದುಕೊಂಡಿದ್ದಾಳೆ.

ಮೊದಲ ಸಲ ಗಂಡನ ಹೆಸರಿನೊಂದಿಗೆ ಅರ್ಜಿ ಸಲ್ಲಿಸಿ ಮನೆ ಪಡೆದಿದ್ದು, 2 ನೇ ಸಲ ಅರ್ಜಿ ಸಲ್ಲಿಸುವಾಗ, ಪತಿಯ ಅಣ್ಣನ ಹೆಸರನ್ನು ಗಂಡನೆಂದು ಹೇಳಿದ್ದಾಳೆ. ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಪಡೆದ ದಾಖಲೆಗಳಲ್ಲಿ ಇದು ಬೆಳಕಿಗೆ ಬಂದಿದ್ದು, ಜಿಲ್ಲಾಡಳಿತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...