alex Certify
ಕನ್ನಡ ದುನಿಯಾ       Mobile App
       

Kannada Duniya

ಪರಾರಿಯಾಗಿರುವ ಪತ್ನಿಗಾಗಿ ಕತ್ತಿ ಹಿಡಿದು ಹುಡುಕಾಡುತ್ತಿದ್ದಾನೆ ಪತಿ

free-vector-hand-with-knifeಸೋದರಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತನ್ನ ಪತ್ನಿ ಆತನ ಜೊತೆ ಪರಾರಿಯಾಗಿರುವ ಹಿನ್ನಲೆಯಲ್ಲಿ ರೊಚ್ಚಿಗೆದ್ದಿರುವ ಪತಿ ಕೈಯಲ್ಲಿ ಕತ್ತಿ ಹಿಡಿದು ಅವರಿಬ್ಬರಿಗಾಗಿ ಹುಡುಕಾಡುತ್ತಿರುವ ಸಂಗತಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕಲೀಂ ಪಾಷಾ ಎಂಬಾತನ ಪತ್ನಿ ಸೋದರಳಿಯ ಸೈಯದ್ ಇಬ್ರಾಹಿಂ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳೆನ್ನಲಾಗಿದೆ. ಈ ಕುರಿತು ಪತಿ- ಪತ್ನಿ ಪದೇ ಪದೇ ಜಗಳವಾಗುತ್ತಿದ್ದು, ಆಕೆ ಒಂದೂವರೆ ತಿಂಗಳ ಹಿಂದೆ ಸೈಯದ್ ಇಬ್ರಾಹಿಂ ಜೊತೆ ಪರಾರಿಯಾಗಿದ್ದಾಳೆನ್ನಲಾಗಿದೆ.

ಕಲೀಂ ಪಾಷಾ ಈ ಕುರಿತು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಪರಾರಿಯಾದವರು ಪತ್ತೆಯಾಗಿಲ್ಲ. ಹೀಗಾಗಿ ರೊಚ್ಚಿಗೆದ್ದಿರುವ ಕಲೀಂ ಪಾಷಾ ಕೈಯಲ್ಲಿ ಕತ್ತಿ ಹಿಡಿದು ಅವರಿಬ್ಬರನ್ನು ಹುಡುಕಾಡುತ್ತಿದ್ದು, ಸಿಕ್ಕರೆ ಅವರಿಬ್ಬರನ್ನು ಹತ್ಯೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗುವುದಾಗಿ ಹೇಳುತ್ತಿದ್ದಾನೆ. ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...