alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಒಂದಾದ ಪುತ್ತೂರಿನ ದಂಪತಿ

ಪುತ್ತೂರು: ಮುತ್ತೈದೆಯಾಗಿ ಸಾಯಬೇಕೆಂದು ಬಹಳಷ್ಟು ಮಂದಿ ಬಯಸುತ್ತಾರೆ. ಆದರೆ ಪುತ್ತೂರಿನ ಕೋಡಿಂಬಾಡಿ ಗ್ರಾಮದ ನಿವಾಸಿ ಲಕ್ಷ್ಮೀ ನಾಯ್ಕ ಪತಿಗಿಂತ ಕೆಲ ಹೊತ್ತಿನ ಮುನ್ನ ಸಾವನ್ನಪ್ಪಿದ್ದಾರೆ.

ಹೌದು, ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಬರುವ ಕೋಡಿಂಬಾಡಿ ಗ್ರಾಮದ ನಿವಾಸಿಗಳಾದ ತನಿಯ ನಾಯ್ಕ (75) ಮತ್ತು ಅವರ ಪತ್ನಿ ಲಕ್ಷ್ಮೀ ನಾಯ್ಕ (70) ಎಂಬುವವರು ಒಂದೇ ದಿನ ಕೇವಲ ಒಂಬತ್ತು ಗಂಟೆಗಳ ಅಂತರದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ತನಿಯ ನಾಯ್ಕ ಕಳೆದೊಂದು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಇವರನ್ನು ಪತ್ನಿ ಲಕ್ಷ್ಮೀ, ಮಗ ದರ್ಣಪ್ಪ ಮತ್ತು ಸೊಸೆ ನೋಡಿಕೊಳ್ಳುತ್ತಿದ್ದರು. ಆರೋಗ್ಯದಿಂದಿದ್ದ ಲಕ್ಷ್ಮೀ ಬುಧವಾರ ತಮ್ಮ ಮನೆ ಸಮೀಪದ ದೇವಸ್ಥಾನದ ಪೂಜೆಗೆ ಹೋಗಿ ಬಂದಿದ್ದು, ಮರು ದಿನ ಮುಂಜಾನೆ ತಲೆತಿರುಗಿ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ.

ಅವರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದಾಗ ಪತಿ ತನಿಯ ನಾಯ್ಕ ಅವರು ಕೂಡ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ನಂತರ ಬಂಧುಗಳೆಲ್ಲ ಸೇರಿ ತನಿಯ ನಾಯ್ಕರ ಅಂತಿಮ ಸಂಸ್ಕಾರವನ್ನೂ ಮುಗಿಸಿದ್ದಾರೆ. ಅಂತೂ ಐವತ್ತು ವರ್ಷಗಳ ಸಾರ್ಥಕ ದಾಂಪತ್ಯ ನಡೆಸಿದ ಇವರು ಸಾವಿನಲ್ಲೂ ಒಂದಾಗಿ ಆದರ್ಶ ದಂಪತಿ ಎನಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...