alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ

ಹಾಸನ: ಕುಡಿತದ ಕಾರಣಕ್ಕೆ ಆರಂಭವಾದ ಜಗಳ ಪತ್ನಿಯ ಕೊಲೆ ಜೊತೆಗೆ ಪತಿಯೂ ನೇಣಿಗೆ ಕೊರಳೊಡ್ಡಿದ ಘಟನೆ ಹಾಸನ ಜಿಲ್ಲೆಯ ಬಿ. ಕಾಟೇನಹಳ್ಳಿಯಲ್ಲಿ ನಡೆದಿದೆ.

ಶಿಲ್ಪಾ (30) ಹತ್ಯೆಗೀಡಾದ ಮಹಿಳೆ. ಜ್ಞಾನೇಶ್ ಮತ್ತು ಶಿಲ್ಪಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ ಜ್ಞಾನೇಶ್ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಇದರಿಂದ ಬೇಸತ್ತಿದ್ದ ಶಿಲ್ಪಾ ಕುಡಿಯದಂತೆ ಬುದ್ಧಿವಾದ ಹೇಳಿದ್ದಳು.

ಇಷ್ಟಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಕೋಪದ ಭರದಲ್ಲಿ ಪತಿ ಜ್ಞಾನೇಶ್, ಶಿಲ್ಪಾಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ಗಾಬರಿಗೊಳಗಾಗಿ ತಾನೂ ಮನೆಯ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ದಿನವಾದರೂ ಮನೆಯಿಂದ ಆಚೆ ಯಾರೂ ಹೊರಬರದ ಕಾರಣ ಪಕ್ಕದ ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...