alex Certify
ಕನ್ನಡ ದುನಿಯಾ       Mobile App
       

Kannada Duniya

ನಡು ರಸ್ತೆಯಲ್ಲೇ ನಡೆದ ಅನಿರೀಕ್ಷಿತ ಘಟನೆಗೆ ಬೆಚ್ಚಿ ಬಿದ್ದ ಮಹಿಳೆ

arrest jn 28

ಬೆಂಗಳೂರು: ರಾಜಧಾನಿಯಲ್ಲಿ ಕಾಮುಕನೊಬ್ಬ ತೋರಿದ ಕಿಡಿಗೇಡಿ ವರ್ತನೆಯಿಂದ, ಮಹಿಳೆಯೊಬ್ಬರು ಬೆಚ್ಚಿ ಬಿದ್ದ ಘಟನೆ ನಡೆದಿದೆ. ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಕಿಡಿಗೇಡಿ ತಬ್ಬಿಕೊಂಡಿದ್ದಾನೆ.

ಬಸವನಗುಡಿಯ ಪ್ರಮುಖ ರಸ್ತೆಯೊಂದರಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ತಿರುವೊಂದರಲ್ಲಿ ರಸ್ತೆ ದಾಟಲು ನಿಂತಿದ್ದಾರೆ. ಈ ಸಂದರ್ಭದಲ್ಲಿ ಏಕಾಏಕಿ ಎದುರಿಗೆ ಬಂದ ಕಿಡಿಗೇಡಿಯೊಬ್ಬ ಅವರನ್ನು ತಬ್ಬಿಕೊಂಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಬೆಚ್ಚಿ ಬಿದ್ದ ಮಹಿಳೆ ಜೋರಾಗಿ ಕಿರುಚಾಡಿದ್ದಾರೆ. ಮಹಿಳೆ ಕಿರುಚಿದ ಕೂಡಲೇ ಕಾಮುಕ ಪರಾರಿಯಾಗಲೆತ್ನಿಸಿದ್ದಾನೆ. ಅಲ್ಲಿದ್ದ ಸಾರ್ವಜನಿಕರು ಕಾಮುಕನನ್ನು ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿದ್ದಲ್ಲದೇ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮಹಿಳೆಯನ್ನು ತಬ್ಬಿಕೊಂಡು ಓಡಿಹೋಗಲು ಯತ್ನಿಸಿದ ಕಾಮುಕನನ್ನು ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೋಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈತ ಮಹಿಳೆಗೆ ಪರಿಚಯವಿಲ್ಲದ ವ್ಯಕ್ತಿಯಾಗಿದ್ದು, ದಾರಿಯಲ್ಲಿ ಹೋಗುವಾಗಲೇ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...