alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಧ್ಯಮ ಪ್ರತಿನಿಧಿಗಳ ಜೊತೆ ವೆಂಕಟ್ ವಾಗ್ವಾದ

huccha-venkatಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿಯಲ್ಲಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಸಮ್ಮುಖದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಟ ಹುಚ್ಚ ವೆಂಕಟ್ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ.

ನನ್ನ ಚಿತ್ರದ ವಿಮರ್ಶೆ ಬರೆಯುವ ಅಧಿಕಾರ ನಿಮಗಿಲ್ಲವೆಂದು ಹೇಳಿರುವ ಹುಚ್ಚ ವೆಂಕಟ್, ನಿಮ್ಮ ಇಷ್ಟ ಬಂದ ಹಾಗೆ ಬರೆಯುತ್ತೀರಿ. ನೀವ್ಯಾಕೆ ಆ ರೀತಿ ಬರೆಯಬೇಕು ಎಂದೆಲ್ಲಾ ಕೂಗಾಡಿದ್ದಾರೆ.

ತಮ್ಮ ಚಿತ್ರ ‘ಪೊರ್ಕಿ ಹುಚ್ಚ ವೆಂಕಟ್’ ಬಾಕ್ಸಾಫೀಸ್ ನಲ್ಲಿ ಸೋಲು ಕಾಣುತ್ತಿರುವ ಹಿನ್ನಲೆಯಲ್ಲಿ ಹತಾಶೆಗೊಂಡಿರುವ ವೆಂಕಟ್, ಚಲನಚಿತ್ರ ವೀಕ್ಷಕರ ಕುರಿತು ಕೆಲ ಮಾತುಗಳನ್ನಾಡಿದ್ದು, ಇದನ್ನು ಪತ್ರಕರ್ತರು ಪ್ರಶ್ನಿಸಿದಾಗ ವೆಂಕಟ್ ಕೆರಳಿದ್ದಾರೆ. ನಿಮಗೆ ಇಷ್ಟವಿಲ್ಲವೆಂದಾದರೆ ನನ್ನ ಚಿತ್ರ ನೋಡಲು ಬರಬೇಡಿ, ವಿಮರ್ಶೆಯನ್ನೂ ಬರೆಯಬೇಡಿ ಎಂದು ತಾಕೀತು ಮಾಡಿದ್ದಾರೆ.

ಹುಚ್ಚ ವೆಂಕಟ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ. ವೆಂಕಟ್, ರಮೇಶ್ ಭಟ್, ಸೌಮ್ಯ, ರಚನ, ಗಣೇಶ್‌ ರಾವ್ ನಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...