alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪಕ್ಕೆ ಬಂದ ಪ್ರಿಯತಮೆ ಕಂಡು ವರನಿಗೆ ಶಾಕ್!

ಹುಬ್ಬಳ್ಳಿ: ಮದುವೆ ಮಂಟಪಕ್ಕೆ ಬಂದು ಯುವತಿ ಗಲಾಟೆ ಮಾಡಿದ ಘಟನೆ ಹುಬ್ಬಳ್ಳಿಯ ಕೆ.ಇ.ಬಿ. ಸಮುದಾಯಭವನದಲ್ಲಿ ನಡೆದಿದೆ.

ತುಮಕೂರು ಮೂಲದ ಯುವತಿಯನ್ನು 7 ವರ್ಷಗಳಿಂದ ಪ್ರೀತಿಸಿದ್ದ ಯುವಕ, ಆಕೆಗೆ ತಿಳಿಯದಂತೆ ಬೇರೆ ಯುವತಿಯೊಂದಿಗೆ ಇಂದು ಮದುವೆ ಮಾಡಿಕೊಂಡಿದ್ದಾನೆ.

ಈ ವಿಚಾರ ತಿಳಿದು ಮದುವೆ ಮಂಟಪಕ್ಕೆ ಆಗಮಿಸಿದ ಯುವತಿ ಗಲಾಟೆ ಮಾಡಿದ್ದಾಳೆ. ಪ್ರೀತಿಸಿ ಕೈ ಕೊಟ್ಟ ವರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮದುವೆಗೆ ಬಂದವರಿಗೆಲ್ಲಾ ಶಾಕ್ ಆಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ವಿಚಾರಣೆಗಾಗಿ ವರ ಹಾಗೂ ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...