alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲು ನೋವೆಂದು ಆಸ್ಪತ್ರೆಗೆ ಹೋದವನ ಜೀವವೇ ಹೋಯ್ತು

ಹುಬ್ಬಳ್ಳಿ: ಹಲ್ಲು ನೋವಿನಿಂದ ಆಸ್ಪತ್ರೆಗೆ ಹೋದ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ನಿವಾಸಿ ಅಬ್ದಲ್ ಖಾದರ್ ಮೃತಪಟ್ಟವರು. ಹಲ್ಲು ನೋವಿನ ಕಾರಣದಿಂದ ಖಾದರ್ ದಂತ ವೈದ್ಯರೊಬ್ಬರ ಬಳಿ ಹೋಗಿದ್ದು, ಅವರು 3 ಹಲ್ಲುಗಳನ್ನು ಕಿತ್ತಿದ್ದಾರೆ. ಇದರಿಂದಾಗಿ ಖಾದರ್ ಅವರಿಗೆ ರಕ್ತಸ್ರಾವವಾಗಿ, ನಿತ್ರಾಣಗೊಂಡಿದ್ದು, ಪ್ರಜ್ಞೆ ತಪ್ಪಿದ್ದಾರೆ. ಗಂಭೀರವಾಗಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಬ್ದುಲ್ ಖಾದರ್ ಸಾವಿಗೆ ಡೆಂಟಲ್ ವೈದ್ಯರು ಮಾಡಿದ ಯಡವಟ್ಟು ಕಾರಣ ಎಂದು ಮೃತರ ಕುಟುಂಬದವರು ಹುಬ್ಬಳ್ಳಿ ಶಹರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ, ಇದನ್ನು ವೈದ್ಯರು ಅಲ್ಲಗಳೆದಿದ್ದಾರೆ. ನಾನು ಸರಿಯಾಗಿಯೇ ಚಿಕಿತ್ಸೆ, ಸಲಹೆ ನೀಡಿದ್ದೇನೆ. ನಂತರದಲ್ಲಿ ಅವರ ಆರೋಗ್ಯದ ಪರಿಸ್ಥಿತಿ ಕುರಿತಾಗಿ ನನಗೆ ಮಾಹಿತಿ ನೀಡಿರಲಿಲ್ಲ. ವರದಿ ಬಂದ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...