alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರ ಸೋಗಿನಲ್ಲಿ ATM ಗೆ ಬಂದವರು ಮಾಡಿದ್ದೇನು ಗೊತ್ತಾ..?

ಹುಬ್ಬಳ್ಳಿ: ಹಾಡಹಗಲೇ ಗ್ಯಾಸ್ ಕಟರ್ ನಿಂದ ಎ.ಟಿ.ಎಂ. ಯಂತ್ರವನ್ನು ಕತ್ತರಿಸಿ, ಅದರಲ್ಲಿದ್ದ 18 ಲಕ್ಷ ರೂ. ದೋಚಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.

ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಮೊದಲಿಗೆ ಷಟರ್ಸ್ ಎಳೆದುಕೊಂಡಿದ್ದಾರೆ. ಒಳಗೆ ಗ್ಯಾಸ್ ಕಟರ್ ನಿಂದ ಯಂತ್ರವನ್ನು ಕತ್ತರಿಸಿ, ಅದರಲ್ಲಿದ್ದ 18 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.

ಎಸ್.ಬಿ.ಐ. ಬ್ಯಾಂಕ್ ಗೆ ಸೇರಿದ ಎ.ಟಿ.ಎಂ. ಇದಾಗಿದ್ದು, ಸೆಕ್ಯೂರಿಟಿ ಗಾರ್ಡ್ ನಿಯೋಜಿಸಿರಲಿಲ್ಲ. ದೇಶಪಾಂಡೆ ನಗರ ಜನನಿಬಿಡ ಪ್ರದೇಶವಾಗಿದ್ದರೂ, ಕೆಲವು ದಿನಗಳಿಂದ ಈ ಎ.ಟಿ.ಎಂ.ಗೆ ಹಣ ತುಂಬಿರಲಿಲ್ಲ.

ನಿನ್ನೆಯಷ್ಟೇ 18 ಲಕ್ಷ ರೂ. ಹಣ ತುಂಬಲಾಗಿದ್ದು, ಇದನ್ನು ತಿಳಿದ ದುಷ್ಕರ್ಮಿಗಳು ಗ್ಯಾಸ್ ಕಟರ್ ಬಳಸಿ ದರೋಡೆ ನಡೆಸಿದ್ದಾರೆ.

ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...