alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರಿ ಮನೆಯಲ್ಲಿತ್ತು 5000 ಸೀರೆ

sare

ಹುಬ್ಬಳ್ಳಿ: ಭ್ರಷ್ಟಾಚಾರ ನಿಗ್ರಹದಳದ(ಎ.ಸಿ.ಬಿ.) ಅಧಿಕಾರಿಗಳು, ಹುಬ್ಬಳ್ಳಿಯ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಬರೋಬ್ಬರಿ 5000 ಸೀರೆಗಳು ಪತ್ತೆಯಾಗಿವೆ.

ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರ ಮನೆಯಲ್ಲಿ ಅವರ ಪತ್ನಿಗೆ ಸೇರಿದ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಸೀರೆಗಳು ಸಿಕ್ಕಿವೆ ಎನ್ನಲಾಗಿದೆ.

200 ರೂ.ನಿಂದ 10,000 ರೂ.ಗೂ ಅಧಿಕ ಮೌಲ್ಯದ ಸೀರೆಗಳು, 7 ಲಕ್ಷ ರೂ. ನಗದು ಹಾಗೂ ಇತರೆ ದಾಖಲೆ ಪರಿಶೀಲನೆ ನಡೆಸಲಾಗಿದೆ.

ಸೀರೆಗಳ ರಾಶಿ ಕಂಡು ಅಧಿಕಾರಿಗಳು ವಿಚಾರಿಸಿದಾಗ, ಪತ್ನಿ ಸೀರೆ ವ್ಯಾಪಾರ ಮಾಡುತ್ತಾರೆ ಎಂದು ಅಧಿಕಾರಿ ತಿಳಿಸಿದ್ದು, ಆದರೆ, ವ್ಯಾಪಾರದ ಕುರಿತಾದ ಯಾವುದೇ ಲೆಕ್ಕ, ಪತ್ರ, ಚೀಟಿ ತೋರಿಸಿಲ್ಲ ಎನ್ನಲಾಗಿದೆ.  ದಾಳಿಯ ಸಂದರ್ಭದಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ ಅಣ್ಣನ ಮಗನ ಹೆಸರಿನಲ್ಲಿ 2 ಕೋಟಿ ರೂ ಮೌಲ್ಯದ ಆಸ್ತಿ ಖರೀದಿಸಿದ ದಾಖಲೆ ಪತ್ರ ಸಿಕ್ಕಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...