alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶನ ಎದುರು ಜರ್ಕಿನ್ ತೆಗೆದ ಕಳ್ಳ ಮಾಡಿದ್ದೇನು..?

ಹುಬ್ಬಳ್ಳಿ: ನಾಡಿನೆಲ್ಲೆಡೆ ಗಣೇಶೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಂತೆಯೇ ಹುಬ್ಬಳ್ಳಿಯ ಅನೇಕ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದೆ.

ದಾಜಿಬನ್ ಪೇಟೆಯ ಗವಳಿಗಲ್ಲಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಎದುರು ಇಡಲಾಗಿದ್ದ ಕಾಣಿಕೆ ಹುಂಡಿಯನ್ನೇ ಕಳ್ಳನೊಬ್ಬ ಹೊತ್ತುಕೊಂಡು ಹೋಗಿದ್ದಾನೆ.

ಗಣಪತಿಯನ್ನು ಪ್ರತಿಷ್ಠಾಪಿಸಿರುವ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲಿಗೆ ಟಿಪ್ ಟಾಪ್ ಆಗಿ ಬಂದಿದ್ದ ಯುವಕನೊಬ್ಬ ಸುತ್ತ ಮುತ್ತ ಯಾರೂ ಇಲ್ಲದಿರುವುದನ್ನು ಗಮನಿಸಿ, ಧರಿಸಿದ್ದ ಜರ್ಕಿನ್ ಬಿಚ್ಚಿ ಕಾಣಿಕೆ ಹುಂಡಿಯನ್ನು ಅದರಲ್ಲಿ ಮುಚ್ಚಿಕೊಂಡು ತೆಗೆದುಕೊಂಡು ಹೋಗಿದ್ದಾನೆ.

ಈ ದೃಶ್ಯಗಳೆಲ್ಲಾ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...