alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಕೊಡಿಸುವುದಾಗಿ ವಂಚಿಸಿದ್ದ 4 ರೈಲ್ವೇ ನೌಕರರು ಅರೆಸ್ಟ್

arest-rail

ಹುಬ್ಬಳ್ಳಿ: ನೈರುತ್ಯ ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಯುವಕರನ್ನು ವಂಚಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ರೈಲ್ವೇ ಇಲಾಖೆಯ ನೌಕರ ಮತ್ತು ಆತನಿಗೆ ಸಹಕಾರ ನೀಡಿದ್ದ ರೈಲ್ವೇ ಸ್ವಚ್ಛತಾ ಸಿಬ್ಬಂದಿ ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ರೈಲ್ವೇ ವಾಣಿಜ್ಯ ವಿಭಾಗದ ಸಿಬ್ಬಂದಿ ಆನಂದನ್, ಸ್ವಚ್ಛತಾ ಸಿಬ್ಬಂದಿಗಳಾದ ರಮೇಶ್, ಗುರುನಾಥ್ ಹಾಗೂ ಮತ್ತೊಬ್ಬ ಬಂಧಿತ ಆರೋಪಿಗಳಾಗಿದ್ದಾರೆ.

ಮೈಸೂರು, ಚಿತ್ರದುರ್ಗ ಮೊದಲಾದ ಜಿಲ್ಲೆಗಳ 10 ಕ್ಕೂ ಅಧಿಕ ಯುವಕರಿಗೆ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ 2 -3 ಲಕ್ಷ ರೂ ಹಣ ಪಡೆದುಕೊಂಡಿದ್ದ ವಂಚಕರು, ನಕಲಿ ದಾಖಲೆ ಸೃಷ್ಠಿಸಿ ಪರೀಕ್ಷೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ವೈದ್ಯಕೀಯ ಪರೀಕ್ಷೆ ನಡೆಸುವುದಾಗಿ ಯುವಕರನ್ನು ಕರೆಸಿಕೊಂಡು ಹುಬ್ಬಳ್ಳಿಯ ರೈಲ್ವೇ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದಾರೆ.

ಆಗ ಅನುಮಾನದ ಮೇಲೆ ಅಭ್ಯರ್ಥಿಗಳು ವೈದ್ಯರನ್ನು ಪ್ರಶ್ನಿಸಿದಾಗ, ಅಸಲಿ ವಿಷಯ ಗೊತ್ತಾಗಿದೆ. ರೈಲ್ವೇ ಪೊಲೀಸ್ ಅಧಿಕಾರಿಗಳಿಗೆ ಅಭ್ಯರ್ಥಿಗಳು ಮಾಹಿತಿ ನೀಡಿದ್ದು, ನಾಲ್ವರನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...