alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನನ್ನು ಮದುವೆಯಾದ್ರೂ ಕೆಲಸದವನ ಮೇಲೆ ಮೋಹ

ಹುಬ್ಬಳ್ಳಿ: ಇದೊಂದು ರೀತಿಯ ವಿಚಿತ್ರ ಸ್ಟೋರಿ. ಬೇಕರಿ ಮಾಲೀಕನೊಬ್ಬ ಪತ್ನಿಗೆ ವಿಚ್ಛೇದನ ನೀಡಿ ಕೆಲಸದಾಕೆಯನ್ನು ಮದುವೆಯಾಗಿದ್ದು, ಆಕೆ ಇವನನ್ನು ಬಿಟ್ಟು ಕೆಲಸದವನೊಂದಿಗೆ ಪರಾರಿಯಾಗಿದ್ದಾಳೆ.

ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಬೇಕರಿಯನ್ನು ಹೊಂದಿರುವ ವ್ಯಕ್ತಿ, ಪತ್ನಿ ಇದ್ರೂ ಕೆಲಸದಾಕೆ ಮೇಲೆ ಕಣ್ಣು ಹಾಕಿದ್ದಾನೆ. ಮೊದಲೇ ಮದುವೆಯಾಗಿದ್ದ ಕೆಲಸದಾಕೆ ಪತಿಗೆ ಡೈವೋರ್ಸ್ ಕೊಟ್ಟು ಬೇಕರಿ ಮಾಲೀಕನನ್ನು ಮದುವೆಯಾಗಿದ್ದಾಳೆ. ಈತ ಕೂಡ ಪತ್ನಿಗೆ ವಿಚ್ಛೇದನ ನೀಡಿ ಕೆಲಸದಾಕೆಯನ್ನು ವರಿಸಿದ್ದಾನೆ.

ಆದರೆ, ಆತನ ಅದೃಷ್ಟ ಸರಿ ಇರಲಿಲ್ಲ ಅನಿಸುತ್ತೆ. ಪತ್ನಿಯಾದ ಕೆಲಸದಾಕೆಯನ್ನು ಬೇಕರಿ ನೋಡಿಕೊಳ್ಳಲು ಬಿಟ್ಟಿದ್ದಾನೆ. ಬೇಕರಿಯಲ್ಲಿ ಕೆಲಸಕ್ಕೆ ಬಂದಿದ್ದ ಯುವಕನೊಂದಿಗೆ ಸಂಬಂಧ ಬೆಳೆಸಿದ ಮಹಿಳೆ, ಪತಿಗೆ ಕೈ ಕೊಟ್ಟು ಲಕ್ಷಾಂತರ ರೂ. ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ಇದರಿಂದ ಕಂಗಾಲಾದ ಬೇಕರಿ ಮಾಲೀಕ ಪೊಲೀಸರ ಮೊರೆ ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...