alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಮಾರುವ ಮುನ್ನ ಮರೆಯದೆ ಮಾಡಿ ಈ ಕೆಲಸ…!

ಎಲ್ಲಾ ಕಡೆ ಈಗ ಸ್ಮಾರ್ಟ್ ಫೋನ್ ಗಳದ್ದೇ ಟ್ರೆಂಡ್. ಪ್ರತಿ ದಿನ ಹೊಸ ಹೊಸ ಮಾದರಿಯ ಮೊಬೈಲ್ ಗಳು ಮಾರುಕಟ್ಟೆಗೆ ಬರ್ತಿವೆ. ಹಾಗಾಗಿ ಎಲ್ರೂ ಹಳೆ ಫೋನ್ ಕೊಟ್ಟು ಹೊಸದನ್ನು ಕೊಂಡುಕೊಳ್ಳೋದು ಕಾಮನ್ ಆಗ್ಬಿಟ್ಟಿದೆ. ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ಎಕ್ಸ್ ಚೇಂಜ್ ಆಫರ್ ಗಳೂ ಇರುತ್ತವೆ.

ಕ್ಯಾಶಿಫೈನಂಥ ಕಂಪನಿಗಳು ನಿಮ್ಮ ಹಳೆ ಫೋನನ್ನು ಖರೀದಿಸುತ್ತವೆ. ಆದ್ರೆ ಹಳೆ ಮೊಬೈಲ್ ಅನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಡೇಟಾಗಳೆಲ್ಲಾ ಸಂಪೂರ್ಣ ಡಿಲೀಟ್ ಆಗಿದೆ ಅನ್ನೋದನ್ನು ಖಚಿತಪಡಿಸಿಕೊಳ್ಳಿ. ಯಾಕಂದ್ರೆ ಸಂಪೂರ್ಣವಾಗಿ ಅಳಿಸಿಹಾಕದೇ ಇದ್ದಲ್ಲಿ ಅದನ್ನು ಮತ್ತೆ ರಿಕವರ್ ಮಾಡಬಹುದು.

ನಿಮ್ಮ ಅಕೌಂಟ್ಸ್, ಫೈಲ್ಸ್, ಫೋಟೋಗಳನ್ನೆಲ್ಲ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕೆ ಬೆಸ್ಟ್ ಆಪ್ಷನ್ ಗೂಗಲ್ ಫೋಟೋಸ್. ವಿಂಡೋಸ್ ಬಳಕೆದಾರರು ವನ್ ಡ್ರೈವ್ ಬಳಕೆ ಮಾಡಬಹುದು. ಫೇಸ್ಬುಕ್, ಟ್ವಿಟ್ಟರ್, ಬ್ಯಾಂಕ್ ಆ್ಯಪ್, ಇನ್ ಸ್ಟಾಗ್ರಾಮ್ ಹೀಗೆ ಎಲ್ಲಾ ಆ್ಯಪ್ ಗಳಿಂದ್ಲೂ ಲಾಗ್ ಔಟ್ ಆಗಿದ್ದೀರಾ ಅನ್ನೋದನ್ನು ಖಚಿತಪಡಿಸಿಕೊಳ್ಳಿ.

ಆ್ಯಂಡ್ರಾಯ್ಡ್ ಆ್ಯಪ್ ನಲ್ಲಿ ಡೇಟಾ ಡಿಲೀಟ್ ಮಾಡೋದು ಹೇಗೆ ಅನ್ನೋದನ್ನು ನೋಡೋಣ. ಸ್ಕ್ರೀನ್ ಲಾಕ್ ಓಪನ್ ಮಾಡಿ ಸೆಟ್ಟಿಂಗ್ಸ್-ಸೆಕ್ಯೂರಿಟಿ-ಲಾಕ್ ಸ್ಕ್ರೀನ್-ಸ್ಕ್ರೀನ್ ಲಾಕ್ ಓಪನ್ ಮಾಡಿ. ನಂತರ ಫ್ಯಾಕ್ಟರಿ ರಿಸೆಟ್ ಮಾಡುವ ಮೂಲಕ ಎಲ್ಲಾ ಡೇಟಾವನ್ನು ಅಳಿಸಿಹಾಕಬಹುದು. ಅದಕ್ಕಾಗಿ ಸೆಟ್ಟಿಂಗ್ಸ್-ಬ್ಯಾಕಪ್-ರಿಸೆಟ್-ಫ್ಯಾಕ್ಟರಿ ಡೇಟಾ ರಿಸೆಟ್ ಕ್ಲಿಕ್ ಮಾಡಿ.

ಐಫೋನ್ ನಲ್ಲಿ ಡೇಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಯೂಸರ್ ಪ್ರೊಫೈಲ್-ಐಕ್ಲೌಡ್-ಫೈಂಡ್ ಮೈ ಐಫೋನ್ ಕ್ಲಿಕ್ ಮಾಡಿ. ಟರ್ನ್ ಆನ್ ಮಾಡಿದ ನಂತರ ಆ್ಯಪ್ ಗಳನ್ನೆಲ್ಲ ಲಾಗೌಟ್ ಮಾಡಬಹುದು. ರಿಸೆಟ್ ಮಾಡುವ ಮುನ್ನ ನಿಮ್ಮ ಐಕ್ಲೌಡ್ ಅಕೌಂಟ್ ರಿಮೂವ್ ಮಾಡಲು ಸೆಟ್ಟಿಂಗ್ಸ್-ಐಕ್ಲೌಡ್-ಸೈನ್ ಔಟ್ ಕ್ಲಿಕ್ ಮಾಡಿ. ನಂತರ ಸೆಟ್ಟಿಂಗ್ಸ್-ಜನರಲ್-ರಿಸೆಟ್-ಎರೇಸ್ ಆಲ್ ಕಂಟೆಂಟ್ &ಸೆಟ್ಟಿಂಗ್ಸ್ ಕ್ಲಿಕ್ ಮಾಡಿದ್ರೆ ಎಲ್ಲವೂ ಡಿಲೀಟ್ ಆಗುತ್ತವೆ.

ವಿಂಡೋಸ್ ಫೋನ್ ಬಳಸುತ್ತಿರುವವರು ಡೇಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಅಬೌಟ್-ರಿಸೆಟ್ ಯುವರ್ ಫೋನ್ ಆಪ್ಷನ್ ಅನ್ನು ಕ್ಲಿಕ್ ಮಾಡಿ. ರಿಸೆಟ್ ಕನ್ಫರ್ಮ್ ಮಾಡಲು ನಿಮ್ಮ ಪಾಸ್ವರ್ಡ್ ರಿ ಎಂಟರ್ ಮಾಡುವಂತೆ ಸೂಚಿಸುತ್ತದೆ. ಇದೆ ರೀತಿ ಐಓಎಸ್ ಯೂಸರ್ ಗಳು ಕೂಡ ಡೇಟಾ ಡಿಲೀಟ್ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...