alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮಾ ಕ್ಯಾಂಟೀನ್ ಗಿಂತ ಭಿನ್ನವಾಗಿದೆ ಇಂದಿರಾ ಕ್ಯಾಂಟೀನ್..!

rahul-inaugurates-indira-canteen_b9d511ea-82b3-11e7-aa81-8a4dce36eef3

ಬೆಂಗಳೂರಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಿದೆ. ಸರ್ಕಾರ ಇಲ್ಲಿ ಕಡಿಮೆ ಬೆಲೆಯಲ್ಲಿ ಜನರಿಗೆ ಊಟ ಮತ್ತು ಉಪಹಾರ ವಿತರಿಸುತ್ತದೆ. 5 ರೂಪಾಯಿಗೆ ಬೆಳಗಿನ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ಕೊಡಲಾಗ್ತಿದೆ.

ಇಂಥದ್ದೊಂದು ಪರಿಕಲ್ಪನೆ ಹುಟ್ಟಿಕೊಂಡಿದ್ದು ತಮಿಳುನಾಡಿನ ಸಿಎಂ ಆಗಿದ್ದ ಜಯಲಲಿತಾ ಅವರಿಂದ. ತಮಿಳುನಾಡಲ್ಲಿ ಅವರು ಅಮ್ಮಾ ಕ್ಯಾಂಟೀನ್ ಆರಂಭಿಸಿದ್ದರು. ಆದ್ರೆ ಇಂದಿರಾ ಕ್ಯಾಂಟೀನ್, ಅಮ್ಮಾ ಕ್ಯಾಂಟೀನ್ ಗಿಂತ ಕೊಂಚ ವಿಭಿನ್ನವಾಗಿದೆ.

ಅಮ್ಮಾ ಕ್ಯಾಂಟೀನ್ : ಇದು ಮೊದಲು ಆರಂಭವಾಗಿದ್ದು 2013ರಲ್ಲಿ. ಬಡವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸಲು ಜಯಲಲಿತಾ ಅಮ್ಮಾ ಕ್ಯಾಂಟೀನ್ ಶುರು ಮಾಡಿದ್ದರು. ಅಮ್ಮಾ ಕ್ಯಾಂಟೀನ್ ಗಳಲ್ಲಿ 5 ರೂಪಾಯಿಗೆ ಪೊಂಗಲ್, ಅನ್ನ ಸಾಂಬಾರ್, 1 ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಚಿತ್ರಾನ್ನ ಹಾಗೂ ರೈಸ್ ಬಾತ್ ದೊರೆಯುತ್ತದೆ.

ಚಪಾತಿ, ಮೊಸರನ್ನಕ್ಕೆ 3 ರೂಪಾಯಿ ನಿಗದಿ ಮಾಡಲಾಗಿದೆ. ಅಮ್ಮಾ ಕ್ಯಾಂಟೀನ್ ತಮಿಳುನಾಡಿನಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಅಷ್ಟೇ ಅಲ್ಲ ದೇಶಾದ್ಯಂತ ಈ ಯೋಜನೆ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಹಾಗಾಗಿ ನಂತರ ಜಯಲಲಿತಾ ಕಡಿಮೆ ದರದಲ್ಲಿ ಉಪ್ಪು, ಮಿನರಲ್ ವಾಟರ್, ಸಿಮೆಂಟ್ ಹೀಗೆ ವಿವಿಧ ವಸ್ತುಗಳನ್ನು ಅಮ್ಮಾ ಬ್ರಾಂಡ್ ಅಡಿಯಲ್ಲಿ ನೀಡಲು ಯೋಜನೆ ರೂಪಿಸಿದ್ದರು.

ಇಂದಿರಾ ಕ್ಯಾಂಟೀನ್ : ಬೆಂಗಳೂರಿನಲ್ಲಿ ಸದ್ಯ 101 ಇಂದಿರಾ ಕ್ಯಾಂಟೀನ್ ಗಳು ಕಾರ್ಯಾರಂಭ ಮಾಡಿವೆ. ಅಕ್ಟೋಬರ್ 2ರಂದು ಉಳಿದ ಎಲ್ಲಾ ವಾರ್ಡ್ ಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತದೆ. ಬೆಳಗ್ಗೆ ಉಪಹಾರಕ್ಕೆ 5 ರೂಪಾಯಿ, ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ 10 ರೂಪಾಯಿ ನಿಗದಿ ಮಾಡಲಾಗಿದೆ.

ಈ ಕ್ಯಾಂಟೀನ್ ಗಳಿಗೆ ಆಹಾರ ತಯಾರಿಸಲು ಸದ್ಯ 27 ಕಿಚನ್ ಗಳನ್ನು ತೆರೆಯಲಾಗಿದೆ. ಸದ್ಯ 6ರಲ್ಲಿ ಕೆಲಸ ಶುರುವಾಗಿದೆ. ದಿನಕ್ಕೆ 500 ಪ್ಲೇಟ್ ಊಟ, ಉಪಹಾರ ಪೂರೈಸಲಾಗ್ತಿದೆ. ಭವಿಷ್ಯದಲ್ಲಿ ಈ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.

ಮೊದಲು ಇದಕ್ಕೆ ನಮ್ಮ ಕ್ಯಾಂಟೀನ್ ಅಂತಾ ಹೆಸರಿಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದ್ರೆ ಮುಂದಿನ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಹಾಕಿ, ಕ್ಯಾಂಟೀನ್ ಗೂ ರಾಜಕೀಯ ಬಣ್ಣ ಬಳಿಯಲಾಗಿದೆ. ಹೆಸರನ್ನು ಇಂದಿರಾ ಕ್ಯಾಂಟೀನ್ ಅಂತಾ ಬದಲಾಯಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...