alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ಮನೆಯಲ್ಲಿರುವವರಿಗೆಲ್ಲ ಸದ್ಯದಲ್ಲೇ ಸಿಗಲಿದೆ ಕೊಂಚ ರಿಲೀಫ್

bng

ನೀವು ಬಾಡಿಗೆ ಮನೆಯಲ್ಲಿದ್ದೀರಾ? ಹಾಗಿದ್ರೆ ನಿಮಗೆ ಸಮಾಧಾನಕರ ಸುದ್ದಿಯೊಂದು ಇದೆ. ಮುಂದಿನ 3 ತ್ರೈಮಾಸಿಕಗಳೊಳಗೆ ನಿಮ್ಮ ಮನೆ ಬಾಡಿಗೆ ಶೇ. 10-20 ರಷ್ಟು ಕಡಿಮೆಯಾಗಲಿದೆ. ಐಟಿ ವಲಯ ನಷ್ಟದಲ್ಲಿರೋದ್ರಿಂದ ಬೆಂಗಳೂರು, ಹೈದ್ರಾಬಾದ್ ಮತ್ತು ಪುಣೆಯಲ್ಲಿ ಮನೆ ಬಾಡಿಗೆ ಇಳಿಕೆಯಾಗಲಿದೆ.

ಸಿಬ್ಬಂದಿ ನೇಮಕಾತಿ ಹಾಗೂ ನೌಕರರ ವಾರ್ಷಿಕ ವೇತನ ಹೆಚ್ಚಳದ ಒತ್ತಡಕ್ಕೆ ತಲೆಬಾಗಿರುವುದಾಗಿ ಅಸೋಚಾಮ್ ಹೇಳಿದೆ. ಬೆಂಗಳೂರಿನ ಮನೆ ಮಾಲೀಕರು ಕೂಡ ರಿಯಾಲಿಟಿ ಚೆಕ್ ನಡೆಸಿದ್ದು, ಜುಲೈ ನಂತರ ಬಾಡಿಗೆ ಇಳಿಕೆ ಮಾಡಲು ಮುಂದಾಗಿದ್ದಾರೆ.

ಸಂಬಳದಲ್ಲಿ ಏರಿಕೆಯಾಗ್ತಾ ಇಲ್ಲ, ಆದ್ರೆ ಮನೆ ಬಾಡಿಗೆ ಮಾತ್ರ ದಿನೇ ದಿನೇ ದುಬಾರಿಯಾಗ್ತಿದೆ ಅನ್ನೋದು ಜನಸಾಮಾನ್ಯರ ಅಳಲಾಗಿತ್ತು. ಜುಲೈ ನಂತರ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಲ್ಲಿ ಶೇ.10-15ರಷ್ಟು ಬಾಡಿಗೆ ಇಳಿಕೆಯಾಗಲಿದೆ. ಪುಣೆಯಲ್ಲಿ ಬಾಡಿಗೆ ಪ್ರಮಾಣ ಶೇ.20ರಷ್ಟು ಕುಸಿತ ಕಾಣಲಿದೆ. ಗುರ್ಗಾಂವ್ ಮತ್ತು ನೊಯ್ಡಾ ನಿವಾಸಿಗಳಿಗೆ ಕೂಡ ಕೊಂಚ ರಿಲೀಫ್ ಸಿಗಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...