alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ತಿಗಾಗಿ ತಾಯಿಗೆ ಹಿಂಸೆ ನೀಡಿದ ಪಾಪಿ ಪುತ್ರ

ಬಳ್ಳಾರಿ: ಹೆತ್ತ ತಾಯಿ ಮೇಲೆಯೇ ಕಿರಾತಕನೊಬ್ಬ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಹೊಸಪೇಟೆಯ ಸರ್ದಾರ್ ಮೊಹಲ್ಲಾದಲ್ಲಿ ನಡೆದಿದೆ.

ಮೊಹಮ್ಮದ್ ಗಪೂರ್ ಎಂಬಾತನೇ ಇಂತಹ ಕೃತ್ಯವೆಸಗಿದವ. 70 ವರ್ಷದ ವೃದ್ಧೆ ಮಾಬುನ್ನಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಆಸ್ತಿಗಾಗಿ ಕಳೆದ 6 ತಿಂಗಳಿಂದ ತಾಯಿಗೆ ಹಿಂಸೆ ನೀಡುತ್ತಿದ್ದ ಗಪೂರ್, ತಾಯಿ ಮನೆ ಮುಂದೆ ಕುಳಿತಿದ್ದ ಸಂದರ್ಭದಲ್ಲಿ ಚಪ್ಪಲಿ ಕಾಲಿನಲ್ಲಿ ಮುಖಕ್ಕೆ ಒದ್ದು ಎಳೆದಾಡಿದ್ದಾನೆ.

ಈತನ ದೌರ್ಜನ್ಯದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳೀಯರು ಬುದ್ದಿವಾದ ಹೇಳಿದರೂ ಕೇಳದ ಗಫೂರ್ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...