alex Certify
ಕನ್ನಡ ದುನಿಯಾ       Mobile App
       

Kannada Duniya

3 ವರ್ಷದ ಹಿಂದೆ 1 ಲಕ್ಷಕ್ಕೆ ಖರೀದಿಸಿದ್ದ ಹೋರಿ 10 ಲಕ್ಷಕ್ಕೆ ಮಾರಾಟ…!

ಮೂರು ವರ್ಷದ ಹಿಂದೆ ರೈತರೊಬ್ಬರು ಒಂದು ಲಕ್ಷ ರೂಪಾಯಿಗೆ ಖರೀದಿಸಿದ್ದ ಹೋರಿ, ಈಗ ಬರೋಬ್ಬರಿ 10.1 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಖುರ್ದ ಕೋಡಿಹಳ್ಳಿ ಗ್ರಾಮದ ರೇವಣಸಿದ್ದಪ್ಪ ಎಂಬ ರೈತ, ತಮ್ಮ ಹೋರಿಯನ್ನು ತಮಿಳುನಾಡಿನ ವೆಲ್ಲಂಪಾಡಿಯ ರೈತ ಸೆಲ್ವಂ ಅವರಿಗೆ 10.1 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ.

ಮೂರು ವರ್ಷದ ಹಿಂದೆ ರೇವಣಸಿದ್ದಪ್ಪ, ಆಂಧ್ರಪ್ರದೇಶದ ಪಲಮನ್ವೇರಿಯಲ್ಲಿ ಈ ಹೋರಿಯನ್ನು 1 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದು, ಬಳಿಕ ಇದನ್ನು ಚೆನ್ನಾಗಿ ಮೇಯಿಸಿ ಪಳಗಿಸಿದ್ದರು. ಹೋರಿ ಬೆದರಿಸುವ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ರೇವಣಸಿದ್ದಪ್ಪನವರ ಈ ಹೋರಿ ಭಾಗವಹಿಸಿತ್ತು. ಅಮರಾವತಿ ತಳಿಯ ಈ ಹೋರಿ ವೇಗವಾಗಿ ಓಡುವ ವಿಶೇಷತೆಯನ್ನು ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...