alex Certify
ಕನ್ನಡ ದುನಿಯಾ       Mobile App
       

Kannada Duniya

‘ಗೃಹಖಾತೆ ಸಮರ್ಥವಾಗಿ ನಿರ್ವಹಿಸುವೆ’

b-ramanath-r

ಬೆಂಗಳೂರು: ಡಾ. ಜಿ. ಪರಮೇಶ್ವರ್ ಅವರಿಂದ ತೆರವಾದ ಗೃಹಖಾತೆಯ ಹೊಣೆಯನ್ನು ಅರಣ್ಯ ಖಾತೆ ಸಚಿವ ರಮಾನಾಥ್ ರೈ ಅವರಿಗೆ ವಹಿಸುವ ಸಾಧ್ಯತೆ ಇದೆ.

ಸದ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಳಿಯಲ್ಲೇ ಗೃಹ ಖಾತೆ ಇದ್ದು, ರಮಾನಾಥ್ ರೈ ಅವರಿಗೆ ವಹಿಸುವ ಕುರಿತು ಚರ್ಚೆ ನಡೆಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮಾನಾಥ್ ರೈ, ಮುಖ್ಯಮಂತ್ರಿಯವರು ತಮಗೆ ಗೃಹ ಖಾತೆ ವಹಿಸುವ ಕುರಿತಾಗಿ ಚರ್ಚಸಿದ್ದಾರೆ. ಈಗಾಗಲೇ ಹಲವು ಖಾತೆಗಳ ಸಚಿವನಾಗಿ ಕೆಲಸ ಮಾಡಿರುವ ನಾನು ಗೃಹ ಖಾತೆಯನ್ನು ವಹಿಸಿದರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆ ವಿಚಾರಗಳ ಬಗ್ಗೆ ಬಿ.ಜೆ.ಪಿ.ಯವರು ತಮ್ಮ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...