alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ

raje

ಬೆಂಗಳೂರು: ರಾಜ್ಯಸರ್ಕಾರ 2017 ನೇ ಸಾಲಿಗೆ 2 ನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, 22 ಸಾರ್ವತ್ರಿಕ ರಜಾದಿನಗಳನ್ನು ಘೋಷಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾ ದಿನಗಳ ಪಟ್ಟಿ ಪ್ರಕಟಿಸಿದೆ.

ಜನವರಿ 14 ರಂದು ಶನಿವಾರ ಸಂಕ್ರಾಂತಿ ಹಬ್ಬ, ಜನವರಿ 26 ಗುರುವಾರ ಗಣರಾಜ್ಯೋತ್ಸವ, ಫೆಬ್ರವರಿ 24 ಶುಕ್ರವಾರ ಮಹಾಶಿವರಾತ್ರಿ, ಮಾರ್ಚ್ 29 ಬುಧವಾರ ಚಾಂದ್ರಮಾನ ಯುಗಾದಿ, ಏಪ್ರಿಲ್ 14 ಶುಕ್ರವಾರ ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ, ಏಪ್ರಿಲ್ 29 ಶನಿವಾರ ಬಸವ ಜಯಂತಿ, ಮೇ 1 ಸೋಮವಾರ ಕಾರ್ಮಿಕರ ದಿನಾಚರಣೆ, ಜೂನ್ 26 ಸೋಮವಾರ ರಂಜಾನ್, ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ. ಆಗಸ್ಟ್ 25 ಶುಕ್ರವಾರ ವರಸಿದ್ಧಿ ವಿನಾಯಕ ವ್ರತ, ಸೆಪ್ಟಂಬರ್ 2 ಶನಿವಾರ ಬಕ್ರೀದ್, ಸೆಪ್ಟಂಬರ್ 19 ಮಂಗಳವಾರ ಮಹಾಲಯ ಅಮವಾಸ್ಯೆಗೆ ರಜೆ ಇರುತ್ತದೆ.

ಸೆಪ್ಟಂಬರ್ 29 ಶುಕ್ರವಾರ ಮಹಾನವಮಿ, ಆಯುಧಪೂಜೆ, ಸೆಪ್ಟಂಬರ್ 30 ಶನಿವಾರ ವಿಜಯದಶಮಿ, ಅಕ್ಟೋಬರ್ 2 ಸೋಮವಾರ ಗಾಂಧಿ ಜಯಂತಿ, ಅಕ್ಟೋಬರ್ 5 ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ, ಅಕ್ಟೋಬರ್ 18 ಬುಧವಾರ ನರಕ ಚತುರ್ದಶಿ, ಅಕ್ಟೋಬರ್ 20 ಶುಕ್ರವಾರ ಬಲಿಪಾಡ್ಯಮಿ, ದೀಪಾವಳಿ, ನವೆಂಬರ್ 1 ಬುಧವಾರ ಕನ್ನಡ ರಾಜ್ಯೋತ್ಸವ, ನವೆಂಬರ್ 6 ಸೋಮವಾರ ಕನಕದಾಸ ಜಯಂತಿ, ಡಿಸೆಂಬರ್ 1 ಶುಕ್ರವಾರ ಈದ್ ಮಿಲಾದ್, ಡಿಸೆಂಬರ್ 25 ಸೋಮವಾರ ಕ್ರಿಸ್ ಮಸ್ ಗೆ ರಜೆ ಇರುತ್ತದೆ.

ಈ ಪಟ್ಟಿಯಲ್ಲಿ ಏಪ್ರಿಲ್ 9 ರ ಭಾನುವಾರ ಮತ್ತು ಅಕ್ಟೋಬರ್ 1 ಭಾನುವಾರ ಮೊಹರಂ ಕಡೆ ದಿನ ರಜಾದಿನಗಳನ್ನೊಳಗೊಂಡಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...