alex Certify
ಕನ್ನಡ ದುನಿಯಾ       Mobile App
       

Kannada Duniya

2017 ಕ್ಕೆ ಸಾಲು ಸಾಲು ರಜೆ, ರೆಡಿ ಮಾಡ್ಕೊಳಿ ಟ್ರಿಪ್ ವೇಳಾಪಟ್ಟಿ

calendar-holidays-2017

ಇನ್ನೇನು ನವೆಂಬರ್ ಕೊನೆಯ ವಾರದಲ್ಲಿದ್ದೇವೆ. ಡಿಸೆಂಬರ್ ಕಳೆದರೆ ಹೊಸ ವರ್ಷ. 2017 ರಲ್ಲಿ ರಜೆಗಳ ಸುಗ್ಗಿ. ವಾರಾಂತ್ಯದ ಜೊತೆಗೆ ಹೆಚ್ಚಿನ ರಜೆಗಳು ಬಂದಿದ್ದು, ನೌಕರರಿಗೆ, ಐಟಿ ಉದ್ಯೋಗಿಗಳಿಗೆ ಸಂಭ್ರಮಿಸಲು ಇನ್ನೇನು ಬೇಕು. ಈಗಿನಿಂದಲೇ ಪ್ಲಾನ್ ಮಾಡಿ ನಿಮ್ಮ ಟ್ರಿಪ್ ವೇಳಾಪಟ್ಟಿಯನ್ನು ರೆಡಿಮಾಡಿಕೊಳ್ಳಿ.

ಜನವರಿ 14 ರಂದು ಶನಿವಾರ ಸಂಕ್ರಾಂತಿ ಹಬ್ಬದ ರಜೆ ಇದೆ. ಮರುದಿನ ಭಾನುವಾರ ಎಂದಿನಂತೆ ರಜೆ ಇರುತ್ತದೆ. ಜನವರಿ 26 ರಂದು ಗುರುವಾರ ಗಣರಾಜ್ಯೋತ್ಸವ. ಫೆಬ್ರವರಿ 24 ರಂದು ಶುಕ್ರವಾರ ಮಹಾಶಿವರಾತ್ರಿ. ಮಾರ್ಚ್ 13 ರಂದು ಸೋಮವಾರ ಹೋಳಿ ಹಬ್ಬ. ಏಪ್ರಿಲ್ 14 ರಂದು ಗುಡ್ ಫ್ರೈಡೇ ಜೊತೆಗೆ ಅಂಬೇಡ್ಕರ್ ಜಯಂತಿ. ಮೇ 1 ಸೋಮವಾರ ಕಾರ್ಮಿಕರ ದಿನಾಚರಣೆಗೆ ರಜೆ ಇರುತ್ತದೆ.

ಜೂನ್ 26 ಸೋಮವಾರ ಈದ್ ಉಲ್ ಫಿತರ್, ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 25 ರಂದು ಶುಕ್ರವಾರ ಗಣೇಶ ಚತುರ್ಥಿ, ಸೆಪ್ಟಂಬರ್ 2 ರಂದು ಶನಿವಾರ ಬಕ್ರೀದ್ ರಜೆ, ಸೆಪ್ಟಂಬರ್ 19 ಮಂಗಳವಾರ ಮಹಾಲಯ ಅಮಾವಾಸ್ಯೆ, ಸೆಪ್ಟಂಬರ್ 28 ಗುರುವಾರ ಆಯುಧ ಪೂಜೆ, ಮರುದಿನ ವಿಜಯದಶಮಿ, ಅಕ್ಟೋಬರ್ 1 ಭಾನುವಾರ ಮೊಹರಂ, 2 ರಂದು ಸೋಮವಾರ ಗಾಂಧಿ ಜಯಂತಿ, ಅಕ್ಟೋಬರ್ 5 ಗುರುವಾರ ವಾಲ್ಮೀಕಿ ಜಯಂತಿ, ಅಕ್ಟೋಬರ್ 18 ಬುಧವಾರದಿಂದ ದೀಪಾವಳಿ, ನವೆಂಬರ್ 1 ಬುಧವಾರ ಕನ್ನಡ ರಾಜ್ಯೋತ್ಸವ, ಡಿಸೆಂಬರ್ 1 ರಂದು ಶುಕ್ರವಾರ ಮಿಲದ್ ಉನ್ ನಬಿ, ಡಿಸೆಂಬರ್ 25 ಸೋಮವಾರ ಕ್ರಿಸ್ ಮಸ್ ರಜೆ ಇರುತ್ತದೆ.

ಬಹುತೇಕ ರಜೆಗಳು ವಾರಾಂತ್ಯದ ಹಿಂದೆ ಮುಂದೆ ಬಂದಿರುವುದರಿಂದ ನಿಮ್ಮ ಪ್ರವಾಸಕ್ಕೆ ಈಗಿನಿಂದಲೇ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...