alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಕ್ಕೆ ತೆರಳುವವರಿಗೆ ಗುಡ್ ನ್ಯೂಸ್! ಇಂದಿನಿಂದಲೇ ಸಾಲು ಸಾಲು ರಜೆ

ಪ್ರವಾಸ, ಊರಿಗೆ ತೆರಳುವವರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಈ ಶನಿವಾರದಿಂದ ಸಾಲು ಸಾಲು ರಜೆ ಇದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಜೊತೆಗೆ ಸೋಮವಾರ ಬುದ್ಧಪೂರ್ಣಿಮೆಗೆ ರಜೆ ಇದೆ. ಮರುದಿನ ಮಂಗಳವಾರ ಮೇ 1 ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇರುತ್ತದೆ.

ಊರು, ಪ್ರವಾಸಕ್ಕೆ ತೆರಳುವವರು ಸಾಲು ಸಾಲು ರಜೆಯನ್ನು ಬಳಸಿಕೊಳ್ಳಬಹುದಾಗಿದೆ. ಅಂದ ಹಾಗೇ ಏಪ್ರಿಲ್ 30 ರಂದು ಬುದ್ಧ ಪೂರ್ಣಿಮೆ ಪ್ರಯುಕ್ತ ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ರಜೆ ಇರುವುದಿಲ್ಲ. ಅಂದು ನೀವು ರಜೆ ಹಾಕಿದಲ್ಲಿ ಮರುದಿನ ಮೇ 1 ರಂದು ರಜೆ ಇರುತ್ತದೆ.

ನೆಗೋಷಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಏಪ್ರಿಲ್ 30 ಮತ್ತು ಮೇ 1 ರ ರಜಾದಿನಗಳಲ್ಲಿ ಒಂದು ದಿನ ರಜೆ ಇರುತ್ತದೆ.

ಇನ್ನು ಬ್ಯಾಂಕ್ ಗಳಿಗೆ ಇಂದಿನಿಂದ 4 ದಿನ ರಜೆ ಇರುತ್ತದೆ. ಏಪ್ರಿಲ್ 28 ಶನಿವಾರ, ಏಪ್ರಿಲ್ 29 ರಂದು ಭಾನುವಾರ ರಜೆ ಇರುತ್ತದೆ. ಏಪ್ರಿಲ್ 30 ರಂದು ಬುದ್ಧ ಪೂರ್ಣಿಮೆ ರಜೆ ಇದ್ದರೂ, ರಾಜ್ಯದಲ್ಲಿ ಬ್ಯಾಂಕ್ ಗಳು ತೆರೆದಿರುತ್ತವೆ. ಅಂದು ಅನೇಕ ರಾಜ್ಯಗಳಲ್ಲಿ ರಜೆ ಇರುತ್ತದೆ. ಮೇ 1 ರಂದು ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇದ್ದರೆ, ಕೆಲವು ರಾಜ್ಯಗಳಲ್ಲಿ ಎಂದಿನಂತೆ ಬ್ಯಾಂಕ್ ಕಾರ್ಯನಿರ್ವಹಿಸಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...