alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ 4 ದಿನಗಳ ಕಾಲ ರಜೆ

ನಾಳೆಯಿಂದ ಸಾಲು ಸಾಲು ರಜೆ ಇದ್ದು, ನಿಮ್ಮ ಯಾವುದೇ ಕೆಲಸಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳುವುದು ಒಳಿತು. ಕಚೇರಿ, ಬ್ಯಾಂಕ್ ಗಳಿಗೂ ರಜೆ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆಯಾಗಬಹುದು.

ಸೆಪ್ಟಂಬರ್ 29 ರಂದು ಆಯುಧ ಪೂಜೆ, ಸೆಪ್ಟಂಬರ್ 30 ರಂದು ವಿಜಯದಶಮಿ, ಅಕ್ಟೋಬರ್ 1 ರಂದು ಭಾನುವಾರ(ಮೊಹರಂ), ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದೆ.

ಹೀಗೆ ಹಬ್ಬದ ಜೊತೆಗೆ 4 ದಿನ ರಜೆ ಇರುವುದರಿಂದ ನಿಮ್ಮ ಯಾವುದೇ ಕಚೇರಿ, ಬ್ಯಾಂಕಿಂಗ್ ವ್ಯವಹಾರಗಳ ಕುರಿತಾಗಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಇನ್ನು ಹಬ್ಬದ ಸಾಲು ರಜೆ ಪ್ರಯುಕ್ತ ಹೆಚ್ಚಿನವರು ಊರಿನತ್ತ ಮುಖಮಾಡುತ್ತಾರೆ. ಇನ್ನೂ ಕೆಲವರು ಪ್ರವಾಸಕ್ಕೆ ತೆರಳುತ್ತಾರೆ. ಹಬ್ಬದ ಪ್ರಯುಕ್ತ ವಿಶೇಷ ಬಸ್ ಗಳನ್ನು ಓಡಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...