alex Certify ಬಣ್ಣಗಳಲ್ಲಿ ಮಿಂದೇಳುವ ಸಡಗರ ಸಂಭ್ರಮದ ‘ಹೋಳಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಣ್ಣಗಳಲ್ಲಿ ಮಿಂದೇಳುವ ಸಡಗರ ಸಂಭ್ರಮದ ‘ಹೋಳಿ’

ಹೋಳಿಹಬ್ಬ ಎಂದ ಕೂಡಲೇ ನೆನಪಿಗೆ ಬರುವುದು ಬಣ್ಣ. ನಾನಾ ರೀತಿಯ ಬಣ್ಣಗಳನ್ನು ಎರಚುವ, ಭರ್ಜರಿ ಡ್ಯಾನ್ಸ್, ಮಡಿಕೆ ಒಡೆಯುವುದು, ಕಾಮದಹನ ಸೇರಿದಂತೆ ಹಲವು ದೃಶ್ಯಗಳನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ಕಾಣಬಹುದಾಗಿದೆ.

ಶಿವನು ಮೂರನೇ ಕಣ್ಣನ್ನು ತೆರೆದು ಕಾಮನನ್ನು ಸುಟ್ಟ ನೆನಪಿಗಾಗಿ, ಹೋಳಿ ಹಬ್ಬದಂದು ಕಾಮನನ್ನು ದಹಿಸಲಾಗುತ್ತದೆ ಎಂಬುದು ಸೇರಿದಂತೆ, ಹಲವಾರು ಪುರಾಣ ಕತೆಗಳು ಹೋಳಿಹಬ್ಬದ ಹಿನ್ನೆಲೆಗೆ ಪೂರಕವಾಗಿದೆ. ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕಬೇಕು. ಒಳ್ಳೆಯದನ್ನು ಸ್ವೀಕರಿಸಬೇಕೆಂಬ ಅರ್ಥ ಇದರ ಹಿಂದಿದೆ. ಹೋಳಿ ಹಬ್ಬವನ್ನು ವಯಸ್ಸಿನ ಬೇಧವಿಲ್ಲದೆ, ಎಲ್ಲರೂ ಒಂದಾಗಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಒಟ್ಟಾರೆ ಹೋಳಿ ಹಬ್ಬದ ಸಂಭ್ರಮವನ್ನಂತೂ ಹೇಳತೀರದಾಗಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹೋಳಿಹಬ್ಬದ ಆಚರಣೆ ಸಖತ್ ರಂಗೇರತೊಡಗಿದೆ. ಯುವಕರು, ಯುವತಿಯರು ಗುಂಪು ಗುಂಪಾಗಿ ಹೋಳಿ ಹಬ್ಬವನ್ನು ಆಚರಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಾರುಕಟ್ಟೆಯಲ್ಲಿ ರಾಸಾಯನಿಕ ಬಣ್ಣಗಳು ರಾರಾಜಿಸಿದರೂ, ನೈಸರ್ಗಿಕ ಬಣ್ಣಗಳು ಕೂಡ ಹೆಚ್ಚಿನ ಜನರನ್ನು ಆಕರ್ಷಿಸುತ್ತಿವೆ. ಹೋಳಿಹುಣ್ಣಿಮೆಗೆ ಜನಪದರಲ್ಲಿಯೂ ಮಹತ್ವದ ಸ್ಥಾನವಿದೆ. ಕೆಲವು ಕಡೆಗಳಲ್ಲಿ ಓಕುಳಿ(ಬಣ್ಣದ ನೀರು) ಎರಚುವುದು ಸೇರಿದಂತೆ ಹಲವಾರು ಆಚರಣೆಗಳು ನಡೆಯುತ್ತವೆ.

ಆದರೆ ಈ ಬಾರಿ ಕೊರೊನಾ ಇವೆಲ್ಲಾ ಆಚರಣೆಗೆ ತಣ್ಣೀರೆರಚುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...