alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದೆಲ್ಲೆಡೆ ಸಡಗರ ಸಂಭ್ರಮದ ಹೋಳಿ ಆಚರಣೆ

ರಾಜ್ಯದ ಆನೇಕ ಭಾಗಗಳಲ್ಲಿ ಇಂದು ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಗುಂಪುಗೂಡಿದ ಯುವಕರು, ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಸರ್ಕಲ್, ಕಾಲೇಜುಗಳ ಬಳಿ ಹೋಳಿ ಸಂಭ್ರಮ ಕಳೆಗಟ್ಟಿತ್ತು. ಮೈಗೆಲ್ಲ ಬಣ್ಣ ಹಚ್ಚಿಕೊಂಡು ಕೆಲವು ಯುವಕರು ಅತಿ ವೇಗವಾಗಿ ವಾಹನ ಚಲಾಯಿಸಿದ್ದು ಕಂಡು ಬಂದಿತು. ಸಂಚಾರ ಠಾಣೆ ಪೊಲೀಸರು ಕೆಲವೆಡೆ ಯುವಕರಿಗೆ ತಿಳಿ ಹೇಳಿದರು. ತ್ರಿಬಲ್ ರೈಡಿಂಗ್ ಮತ್ತು ಅತಿ ವೇಗದ ಚಾಲನೆ ಮಾಡಿದ ಬೈಕ್ ಸವಾರರಿಗೆ ದಂಡ ವಿಧಿಸಿದ್ದಾರೆ.

ಹಲವು ಕಡೆಗಳಲ್ಲಿ ಕಾಮನ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದ್ದು ನಾಳೆ ಕಾಮದಹನ ಮಾಡಲಾಗುತ್ತಿದೆ. ಹೋಳಿ ಹಬ್ಬದ ಬಣ್ಣಗಳಿಂದ ರಾಜ್ಯ ರಂಗೇರಿತ್ತು. ಅನೇಕ ಕಡೆಗಳಲ್ಲಿ ಇಂದೇ ಹಬ್ಬ ಆಚರಿಸಿದರೆ ಮತ್ತೆ ಕೆಲವೆಡೆ ನಾಳೆ ಹೋಳಿ ಆಚರಣೆಗೆ ಸಿದ್ದತೆಗಳು ನಡೆದಿವೆ.

ವಿಶೇಷವಾಗಿ ಈ ಬಾರಿ ನೈಸರ್ಗಿಕ ಬಣ್ಣಗಳನ್ನು ಮಾರಾಟಕ್ಕೆ ಇಟ್ಟಿದ್ದು, ಯುವಕರಂತೂ ವಿವಿಧ ಬಣ್ಣಗಳ ಮೂಲಕ ಕಂಗೊಳಿಸಿದರು. ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಂದ ಕಲರ್ಫುಲ್ ಹೋಳಿ ನಡೆಯಿತು. ಕೆಲವೆಡೆ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಹೋಳಿ ಆಚರಿಸಿದ್ದು ವಿಶೇಷವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...