alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಐವಿ ಪೀಡಿತೆ ಆತ್ಮಹತ್ಯೆಯಿಂದ ಕೆರೆ ನೀರನ್ನೇ ಖಾಲಿ ಮಾಡಿಸಿದರು…!

ಬೆಂಗಳೂರು: ಇದೊಂದು ಬರಪೀಡಿತ ಗ್ರಾಮ. ಆದರೂ 23 ಎಕರೆ ಕೆರೆಯಲ್ಲಿ ತುಂಬಿರುವ ಸಂಪೂರ್ಣ ನೀರನ್ನು ಗ್ರಾಮಸ್ಥರು ಖಾಲಿ ಮಾಡಿಸುತ್ತಿದ್ದಾರೆ!!! ಇದಕ್ಕೆ ಕಾರಣ ಆ ಕೆರೆಗೆ ಬಿದ್ದು ಎಚ್ಐವಿ ಪೀಡಿತೆ ಆತ್ಮಹತ್ಯೆ ಮಾಡಿಕೊಂಡಿರುವುದು.

ಹುಬ್ಬಳ್ಳಿಯ ಸಮೀಪದ ಮೊರಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ನೀರನ್ನು ಗ್ರಾಮಸ್ಥರು ಕಳೆದ ಆರು ದಿನಗಳಿಂದ ಖಾಲಿ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೆರೆಯಲ್ಲಿ ಎಚ್ಐವಿ ಪೀಡಿತೆ ಮೃತಪಟ್ಟಿದ್ದು, ಮೀನುಗಳು ಆಕೆಯ ದೇಹವನ್ನು ತಿಂದಿದ್ದವು. ಇದರಿಂದ ರಕ್ತವು ನೀರಿನೊಳಗೆ ಸೇರಿ ರೋಗವು ತಮಗೆ ಹರಡಬಹುದೆಂಬ ಭಯದಲ್ಲಿ ಗ್ರಾಮಸ್ಥರು ಇದ್ದಾರೆ.

ಆದರೆ ಇದರಿಂದ ಯಾವುದೇ ಅಪಾಯವಿಲ್ಲ ಎಂದು ಸ್ಥಳೀಯ ಆಡಳಿತ ಹೇಳಿದರೂ ಗ್ರಾಮಸ್ಥರು ಕೇಳದೇ ಒತ್ತಾಯ ಮಾಡಿದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಮಲಪ್ರಭಾ ನದಿಯ ಕಾಲುವೆ ನೀರಿನಿಂದ ಈ ಕೆರೆಯನ್ನು ತುಂಬಿಸಲಾಗಿತ್ತು. ಆದರೆ ಈಗ ಸಂಪೂರ್ಣ ನೀರನ್ನು ಖಾಲಿ ಮಾಡಿದ ಬಳಿಕ ಪುನಃ ನೀರು ತುಂಬುವ ಕಾರ್ಯ ನಡೆಯಬೇಕಿದೆ.ಇದನ್ನು ಡಿಸೆಂಬರ್ 20 ರಂದು ಮಾಡಲಾಗುವುದೆಂದು ಸ್ಥಳೀಯ ಆಡಳಿತ ಹೇಳಿದೆ. ಅಧ್ಯಯನದ ಪ್ರಕಾರ ಎಚ್ಐವಿ ವೈರಸ್ ನೀರಿನಲ್ಲಿ ಸೇರಿದರೆ ಹೆಚ್ಚು ಕಾಲ ಬದುಕಿರಲು ಸಾಧ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...