alex Certify
ಕನ್ನಡ ದುನಿಯಾ       Mobile App
       

Kannada Duniya

24 ಗಂಟೆಯೊಳಗೆ ಒಂದೇ ಕುಟುಂಬದ ಮೂವರ ಸಾವು

ctd-de-snk

ಚಿತ್ರದುರ್ಗ: ಆಘಾತಕಾರಿ ಘಟನೆಯೊಂದರಲ್ಲಿ 24 ಗಂಟೆ ಅವಧಿಯಲ್ಲಿ ಒಂದೇ ಮನೆಯಲ್ಲಿ ಮೂವರು ಸಾವು ಕಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಂಡೇನಹಳ್ಳಿ ಪಾಳ್ಯದ ಮಡ್ನಪ್ಪ(65), ಅವರ ಸೊಸೆ ರಂಜಿತಾ(23) ಹಾಗೂ ಮೊಮ್ಮಗಳು ಕೀರ್ತನಾ(3) ಮೃತಪಟ್ಟವರು.

ಕೀರ್ತನಾ ನಿನ್ನೆ ಮನೆಯಲ್ಲಿ ಮಲಗಿದ್ದ ವೇಳೆ ಅಸ್ವಸ್ಥಳಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮಾರ್ಗಮಧ್ಯದಲ್ಲೇ ಕೀರ್ತನಾ ಮೃತಪಟ್ಟಿದ್ದು, ಆಘಾತದಿಂದ ತಾಯಿ ರಂಜಿತಾ ಕೂಡ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ಮಡ್ನಪ್ಪ ಮಲಗಿದಲ್ಲೇ ಸಾವನ್ನಪ್ಪಿದ್ದಾರೆ. ಒಂದೇ ದಿನದಲ್ಲಿ ಒಂದೇ ಕುಟುಂಬದವರು ಮೃತಪಟ್ಟಿದ್ದರಿಂದ ಗ್ರಾಮಸ್ಥರು, ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಅವರ ಮನೆಯನ್ನು ಹುಡುಕಾಡಿದಾಗ, ವಿಷಕಾರಿ ಹಾವೊಂದು ಪತ್ತೆಯಾಗಿದೆ. ಮೂವರಿಗೂ ಹಾವು ಕಚ್ಚಿ ಮೃತಪಟ್ಟಿರಬಹುದೆಂದು ಹೇಳಲಾಗಿದೆ. ಸ್ಥಳೀಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...