alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಮೆಟ್ರೋದಲ್ಲಿ ಹೋದ್ರು, ಕಾಂಗ್ರೆಸ್ಸಿಗರು ಟ್ರಾಲ್ ಮಾಡಿದ್ರು

ರಾಷ್ಟ್ರ ರಾಜಧಾನಿ ನವದೆಹಲಿಯ ಭಾರಿ ವಾಹನ ದಟ್ಟಣೆಯಲ್ಲಿ ಸಮಯ ಉಳಿಸುವ ಸಲುವಾಗಿ ಪ್ರಧಾನಿ ಮೋದಿ ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಕಾಂಗ್ರೆಸಿಗರು ಇದನ್ನೇ, ಪೆಟ್ರೋಲ್, ಡೀಸೆಲ್ ದರ ಪ್ರಧಾನಿಯನ್ನೂ ತಟ್ಟಿದ್ದು, ಮೆಟ್ರೋ ಬಳಸುವಂತೆ ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಡೆದದ್ದಿಷ್ಟು: ದೆಹಲಿಯ ದ್ವಾರಕದಲ್ಲಿ ನಡೆಯಬೇಕಿದ್ದ ಸಮಾರಂಭವೊಂದರಲ್ಲಿ ಪ್ರಧಾನಿ ಭಾಗವಹಿಸಬೇಕಿತ್ತು. ರಸ್ತೆ ಮಾರ್ಗದಲ್ಲಿ ಝೀರೋ ಟ್ರಾಫಿಕ್ ನಲ್ಲಿ ಸಾಗಿದರೆ ಜನಸಾಮಾನ್ಯರಿಗೆ ತೊಂದರೆ. ಮೆಟ್ರೋದಲ್ಲಾದರೆ ಕೇವಲ 14 ನಿಮಿಷದ ದಾರಿ. ಯಾರಿಗೂ ತೊಂದರೆಯಿಲ್ಲ ಎಂದು ಬಗೆದ ಪ್ರಧಾನಿ ಜನಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣಿಸಿದರು.

ಕಾರ್ಯಕ್ರಮ ಮುಗಿದ ಬಳಿಕ ಮೆಟ್ರೋದಲ್ಲೇ ಹಿಂದಿರುಗಿದರು. ಈ ಸಂದರ್ಭದಲ್ಲಿ ಸಹ ಪ್ರಯಾಣಿಕರ ಜೊತೆ ಕಷ್ಟಸುಖಗಳ ಬಗ್ಗೆ ಮಾತನಾಡಿದರು. ಇದರ ಮೂರ್ನಾಲ್ಕು ಫೋಟೋಗಳನ್ನು ತಮ್ಮ ವೆಬ್ ಸೈಟಿನಲ್ಲೂ ಪ್ರಧಾನಿ ಅಪ್ ಲೋಡ್ ಮಾಡಿದ್ದಾರೆ. ಇದಕ್ಕೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪೆಟ್ರೋಲ್ ದರ ಹೆಚ್ಚಳದ ಕಾರಣಕ್ಕೆ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರಾ ಇಲ್ಲಾ ಮುಂದಿನ ಚುನಾವಣೆಗೆ ನಾಟಕವಾ ಎಂದು ಕಾಲೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...