alex Certify
ಕನ್ನಡ ದುನಿಯಾ       Mobile App
       

Kannada Duniya

‘ನನ್ನ ಪತ್ನಿ ಯುವತಿಯಲ್ಲ, ತೃತೀಯಲಿಂಗಿ’

ಬೆಂಗಳೂರು: ತನ್ನ ಪತ್ನಿ ತೃತೀಯ ಲಿಂಗಿಯಾಗಿದ್ದು, ಲಿಂಗ ಪರೀಕ್ಷೆಗೆ ಅನುಮತಿ ನೀಡಬೇಕೆಂದು ಕೋರಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

2011 ರಲ್ಲಿ ಹಿರಿಯರು ಒಪ್ಪಿ ಮದುವೆ ಮಾಡಲಾಗಿದ್ದು, ಆಕೆ ಯುವತಿ ಎಂದು ತಿಳಿದು ವ್ಯಕ್ತಿ ಮದುವೆಯಾಗಿದ್ದಾರೆ. ಆದರೆ, ಮದುವೆಯಾದ ಬಳಿಕ ತೃತೀಯ ಲಿಂಗಿ ಎಂದು ತಿಳಿದು ಆಕೆಯಿಂದ ದೂರವಾಗಿದ್ದಾರೆ.

ಪತಿಯ ವಿರುದ್ಧ ಪತ್ನಿ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದು, ಪ್ರಕರಣದ ಕುರಿತಾಗಿ ಮೈಸೂರು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ತನ್ನ ಮದುವೆಯನ್ನು ರದ್ದುಪಡಿಸಲು ವ್ಯಕ್ತಿ ಮನವಿ ಮಾಡಿದ್ದು, ಪತ್ನಿಯ ಲಿಂಗ ಪರೀಕ್ಷೆಗೆ  ಅನುಮತಿ ನೀಡಬೇಕೆಂದು ಕೋರಿದ್ದಾರೆ.

2 ಸಲ ಪರೀಕ್ಷೆಗೆ ಸಮಯ ನಿಗದಿ ಮಾಡಿದ್ದರೂ, ಆಕೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿಲ್ಲ. ಸ್ಥಳೀಯ ಕೋರ್ಟ್ ನಲ್ಲಿ ಆಕೆ ಬಚಾವ್ ಆಗಿದ್ದು, ಆಕೆಗೆ ಲಿಂಗ ಪರೀಕ್ಷೆಗೆ ನಿರ್ದೇಶನ ನೀಡಬೇಕೆಂದು ವ್ಯಕ್ತಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಆದರೆ, ಇದನ್ನು ಒಪ್ಪದ ಹೈಕೋರ್ಟ್, ಸೆಷನ್ಸ್ ಕೋರ್ಟ್ ನಲ್ಲಿಯೇ ಕೇಸ್ ದಾಖಲಿಸುವಂತೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...