alex Certify
ಕನ್ನಡ ದುನಿಯಾ       Mobile App
       

Kannada Duniya

ಹೇರ್ ಕಟ್ ಗೆ ಇಲ್ಲಿ ಬಳಕೆಯಾಗುತ್ತೆ ಕ್ಯಾಂಡಲ್..!

hair-cut

ಕಲಬುರಗಿ: ಹೇರ್ ಕಟಿಂಗ್ ಮಾಡಲು ಸಾಮಾನ್ಯವಾಗಿ ಕತ್ತರಿ ಬಳಸುತ್ತಾರೆ. ಆದರೆ ಕಲಬುರಗಿ ಜಿಲ್ಲೆಯಲ್ಲಿರುವ ಕಟಿಂಗ್ ಶಾಪ್ ನಲ್ಲಿ ಮೇಣದ ಬತ್ತಿಯಲ್ಲಿ ಹೇರ್ ಕಟ್ ಮಾಡಲಾಗುತ್ತದೆ.

ಹೌದು, ಅಚ್ಚರಿಯಾದರೂ ಇದು ನಿಜ. ಇಲ್ಲಿನ ಕಟಿಂಗ್ ಶಾಪ್ ನಲ್ಲಿ ಮೇಣದ ಬತ್ತಿಯನ್ನು ಬಳಸಿ ಹೇರ್ ಕಟ್ ಮಾಡಲಾಗುತ್ತದೆ. ಇಂತಹ ವಿಶೇಷ ಸಲೂನ್ ಇರುವುದು. ಕಲಬುರಗಿ ಜಿಲ್ಲೆಯ ಶಹಬಾದ್ ನ ರಾಜ್ ಮೆನ್ಸ್ ಪಾರ್ಲರ್ ನಲ್ಲಿ. ಕತ್ತರಿ ಬದಲಿಗೆ ಕ್ಯಾಂಡಲ್ ನಲ್ಲಿಯೇ ಕೂದಲು ಕತ್ತರಿಸಲಾಗುತ್ತದೆ. ಸಲೂನ್ ಮಾಲೀಕ ದಶರಥ ಅವರು ಇಂತಹ ವಿನೂತನ ಪ್ರಯೋಗಕ್ಕೆ ಮುಂದಾದವರು.

ದಶರಥ ಅವರ ಸಲೂನ್ ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಬರುವವರು ಕೂಡ ಮೊದಲಿಗೆ ಅಚ್ಚರಿ ವ್ಯಕ್ತಪಡಿಸಿದರೂ, ಅವರ ಕೈ ಚಳಕವನ್ನು ಕಂಡು ಬೆರಗಾಗಿದ್ದಾರೆ. ದಶರಥ ಅವರ ವಿನೂತನ ಪ್ರಯೋಗ ಯಶಸ್ವಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...