alex Certify
ಕನ್ನಡ ದುನಿಯಾ       Mobile App
       

Kannada Duniya

ಲೇವಾದೇವಿದಾರರ ಕಿರುಕುಳಕ್ಕೆ ಕಡಿವಾಣ: ಸಹಾಯವಾಣಿ ತೆರೆಯಲು ಆದೇಶ

ಬೆಂಗಳೂರು: ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದವರಿಗೆ ಲೇವಾದೇವಿದಾರರು ನೀಡುವ ಕಿರುಕುಳ ತಡೆಯಲು ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿರುವ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಘಟಕಗಳಲ್ಲಿ ಸಹಾಯವಾಣಿಯನ್ನು ತೆರೆಯಲು ನಿರ್ಧರಿಸಲಾಗಿದೆ.

ಈ ಹಿನ್ನಲೆಯಲ್ಲಿ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು, 24/7 ಸಹಾಯವಾಣಿಯನ್ನು ಆರಂಭಿಸಿ ಅದನ್ನು ಸಬ್ ಇನ್ಸ್ ಪೆಕ್ಟರ್ ರ್ಯಾಂಕಿನ ಅಧಿಕಾರಿಗಳು ನಿರ್ವಹಿಸಬೇಕು ಮತ್ತು ಜನರಿಂದ ದೂರುಗಳು ಬಂದ ತಕ್ಷಣ ಸ್ಪಂದಿಸಬೇಕು ಎಂದು ಹೇಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಲಯ ಆಯುಕ್ತರುಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಜನರಿಗೆ ಕಿರುಕುಳ ನೀಡುವ ಖಾಸಗಿ ಲೇವಾದೇವಿಗಾರರ ವಿರುದ್ಧ ಕರ್ನಾಟಕ ಲೇವಾದೇವಿಗಾರರ ಕಾಯ್ದೆ-1961, ಕರ್ನಾಟಕ ಪಾನ್ ಬ್ರೋಕರ್ಸ್ ಕಾಯ್ದೆ-1961, ಚಿಟ್ ಫಂಡ್ ಕಾಯ್ದೆ-1982 ಮತ್ತು ಕರ್ನಾಟಕ ಪ್ರೊಹಿಬೀಷನ್ ಆಫ್ ಚಾರ್ಜಿಂಗ್ ಎಕ್ಸೊರ್ಬಿಟೆಂಟ್ ಇಂಟರೆಸ್ಟ್ ಕಾಯ್ದೆ-2004 ರಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...