alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದವರ ರಕ್ಷಣೆಗೆ ನಿಂತ ಉದ್ಯಮಿ…?

ಬೆಂಗಳೂರು: ಶಾಸಕ ಹ್ಯಾರಿಸ್​ ಪುತ್ರ ಮೊಹಮ್ಮದ್ ನಲಪಾಡ್​ರಿಂದ ಹಲ್ಲೆಗೊಳಗಾಗಿದ್ದ ವಿದ್ವತ್​ ಅವರ ತಂದೆ ಉದ್ಯಮಿ ಲೋಕನಾಥ್​ ಈಗ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಾಗಿದ್ದಾರೆ. ಆಟೋ ಚಾಲಕನೊಬ್ಬನಿಗೆ ಆಕ್ಸಿಡೆಂಟ್ ಮಾಡಿ, ಹಲ್ಲೆ ನಡೆಸಿದ ವಿದೇಶಿ ಮಹಿಳೆಯರನ್ನು ರಕ್ಷಿಸಿದ ಉದ್ಯಮಿ ಲೋಕನಾಥ್, ಆಟೋ ಡ್ರೈವರ್​ ನೀಡಿದ ದೂರನ್ನೇ ಪೊಲೀಸ್ ಠಾಣೆಯಲ್ಲಿ ಮುಚ್ಚಿಹಾಕಲು ಯತ್ನಿಸಿದ ಘಟನೆ ನಡೆದಿದೆ.

ಬ್ಯಾಪ್ಟಿಸ್ಟ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಲೋಕನಾಥ್ ಅವರ ಸ್ನೇಹಿತರ ಮಕ್ಕಳಾದ ನ್ಯೂಜಿಲೆಂಡ್​ ಮೂಲದ ವಿದ್ಯಾರ್ಥಿನಿಯರು ಒನ್​ವೇಯಲ್ಲಿ ಬಂದು ಆಟೋಗೆ ಗುದ್ದಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕ ಬೈದಿದ್ದಾನೆ. ಆಟೋ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ವಿದೇಶಿ ವಿದ್ಯಾರ್ಥಿನಿಯರು ಆಟೋ ಚಾಲಕನ ಮುಖಕ್ಕೆ ರಕ್ತ ಬರುವವರೆಗೂ ಹೊಡೆದಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಆಟೋ ಚಾಲಕ ಹಾಗೂ ವಿದ್ಯಾರ್ಥಿಗಳನ್ನು ಸಂಜಯ ನಗರ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆ ಮೆಟ್ಟಿಲೇರುತ್ತಿದ್ದಂತೆ ವಿದೇಶಿ ವಿದ್ಯಾರ್ಥಿನಿಯರು ವಿದ್ವತ್ ತಂದೆ ಲೋಕನಾಥ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಠಾಣೆಗೆ ಬಂದ ಲೋಕನಾಥ್, ರಾಜಿ ಸಂಧಾನ ಮಾಡಿಸಿ ವಿದೇಶಿ ವಿದ್ಯಾರ್ಥಿಗಳನ್ನು ಬಿಟ್ಟು ಬಿಡಲು ಹೇಳಿದ್ದಾರೆ. ಇದರಿಂದ ಪೊಲೀಸರು ಆಟೋ ಚಾಲಕ ನೀಡಿದ ದೂರನ್ನೂ ದಾಖಲಿಸಿಲ್ಲ. ವಿಷಯ ಮಾಧ್ಯಮಗಳಿಗೆ ತಿಳಿದು ಉದ್ಯಮಿಯ ನಡೆಯನ್ನು ಪ್ರಶ್ನಿಸಿದ್ದಾರೆ.

ಮಗನ ಮೇಲಿನ ಹಲ್ಲೆ ಪ್ರಕರಣದ ವೇಳೆ ಶಾಸಕನ ಪುತ್ರ ನಲಪಾಡ್ ಗೆ ಶಿಕ್ಷೆಯಾಗಲೇಬೇಕೆಂದು ಹೋರಾಡಿದ ಲೋಕನಾಥ್, ಈಗ ವಿದೇಶಿ ಸ್ನೇಹಿತರ ಮಕ್ಕಳಿಂದ ಸಾಮಾನ್ಯ ಆಟೋ ಡ್ರೈವರ್​ ಮೇಲೆ ಆದ ಹಲ್ಲೆಯನ್ನು ಮುಚ್ಚಿ ಹಾಕಲು ಮುಂದಾಗಿರುವುದು ಖಂಡನೆಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...