alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆನೋವಾಗಿ ಪರಿಣಮಿಸಿದೆ ಹೆಲ್ಮೆಟ್ ರಕ್ಷಣೆ

86012210-helmets_6

ಸುಪ್ರಿಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ಈಗಾಗಲೇ ಲಕ್ಷಾಂತರ ಹೆಲ್ಮೆಟ್ ಗಳು ಮಾರಾಟವಾಗಿವೆ. ರಾಜ್ಯದಾದ್ಯಂತ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಯಲ್ಲಿದ್ದು, ವಾಹನ ಸವಾರರು ಹೆಲ್ಮೆಟ್ ಬಳಸುತ್ತಿದ್ದಾರೆ.

ಇದರಿಂದಾಗಿ ಆಟೋಮೊಬೈಲ್ಸ್ ಶೋ ರೂಂ ಗಳಲ್ಲಿ, ಕಿರಾಣಿ ಅಂಗಡಿ, ಬೀದಿ ಬದಿಯಲ್ಲೂ ಕೂಡ ಹೆಲ್ಮೆಟ್ ವ್ಯಾಪಾರ ಆರಂಭದಲ್ಲಿ ಭರ್ಜರಿಯಾಗಿಯೇ ನಡೆಯಿತು. ಹೊರ ರಾಜ್ಯಗಳಿಂದ ಗುಣಮಟ್ಟವಿಲ್ಲದ ಹೆಲ್ಮೆಟ್ ಗಳನ್ನು ಲೋಡ್ ಗಟ್ಟಲೆ ತಂದು ಕಡಿಮೆ ದರಕ್ಕೆ ಮಾರಾಟ ಮಾಡಲಾಯಿತು. ಐಎಸ್ಐ ಗುಣಮಟ್ಟದ ಹೆಲ್ಮೆಟ್ ಗಳನ್ನೇ ಬಳಸಬೇಕೆಂಬ ನಿಯಮವಿದ್ದರೂ ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕಾಗಿ ಕಳಪೆ ಗುಣಮಟ್ಟದ ಹೆಲ್ಮೆಟ್ ಗಳಿಗೆ ಹೆಚ್ಚಿನ ಜನ ಮುಗಿಬೀಳುತ್ತಿದ್ದರು.

ಹೆಲ್ಮೆಟ್ ಕಡ್ಡಾಯ ಆದೇಶದಿಂದ ವಾಹನ ಸವಾರರು ಅನಿವಾರ್ಯವಾಗಿ ಬೇಸಿಗೆಯಲ್ಲೂ ಹೆಲ್ಮೆಟ್ ಧರಿಸಬೇಕಿದೆ. ಕಳಪೆ ಹೆಲ್ಮೆಟ್ ಕಾರಣದಿಂದಾಗಿ, ಬಿಸಿಲಿನ ಕಾವಿಗೆ ಕೆಲವರಿಗೆ ಬೆವರು, ತಲೆನೋವು, ತುರಿಕೆ, ಅಲರ್ಜಿ ಮೊದಲಾದ ತೊಂದರೆ ಕಾಣಿಸಿಕೊಂಡಿದ್ದು, ಇದನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಕೆಲವು ಕಡೆಗಳಲ್ಲಿ ಐಎಸ್ಐ ಸ್ಟಿಕ್ಕರ್ ಹಾಕಿ ಹೆಲ್ಮೆಟ್ ಗಳನ್ನು ರಸ್ತೆ ಬದಿಗಳಲ್ಲಿ ಇದು ಕಂಪೆನಿಯ ಐಎಸ್ಐ ಮಾರ್ಕಿನ ಹೆಲ್ಮೆಟ್ ಎಂದು ಹೇಳಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಮೋಸ ಹೋಗುತ್ತಿದ್ದಾರೆ. ಅಲ್ಲದೇ, ಇರುವ ಹೆಲ್ಮೆಟ್ ಗಳನ್ನೇ ರಕ್ಷಿಸಿಕೊಳ್ಳುವುದು ಬೈಕ್ ಸವಾರರಿಗೆ ಸಮಸ್ಯೆಯಾಗಿದೆ. ಈ ನಡುವೆ ಹೆಲ್ಮೆಟ್ ಕಳ್ಳರ ಹಾವಳಿ ಕೂಡ ಹೆಚ್ಚಾಗಿದೆ.

ಪ್ರಾಣ ರಕ್ಷಣೆಗಿಂತ ಹೆಲ್ಮೆಟ್ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತಾಗಿದೆ. ಕೆಲಸ ಕಾರ್ಯಕ್ಕಾಗಿ ಅಥವಾ ಅಂಗಡಿಗಳಿಗೆ ವಸ್ತು ಖರೀದಿಗೆ ಹೋಗಿ ಬರುವಷ್ಟರಲ್ಲಿ ಬೈಕಿನಲ್ಲಿ ಇಟ್ಟಿದ್ದ ಹೆಲ್ಮೆಟ್ ಮಂಗಮಾಯವಾಗಿರುತ್ತದೆ. ಕಳ್ಳರು ತಮ್ಮ ಕೈಚಳಕ ತೋರಿಸಿ ಅಲ್ಲಿಂದ ಪರಾರಿಯಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಒಟ್ಟಾರೆ ರಕ್ಷಣೆಗೆ ಬಳಸಬೇಕಾದ ಹೆಲ್ಮೆಟ್ ಕೆಲವು ಜನರಿಗೆ ಕಿರಿಕಿರಿ ಉಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...