alex Certify
ಕನ್ನಡ ದುನಿಯಾ       Mobile App
       

Kannada Duniya

ಸವಾರರಿಗೆ ISI ಹೆಲ್ಮೆಟ್ ಕಡ್ಡಾಯವಲ್ಲ, ಆದರೆ….

ಬೆಂಗಳೂರು: ಫೆಬ್ರವರಿ 1 ರಿಂದ ಐ.ಎಸ್.ಐ. ಮಾರ್ಕ್ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇಲ್ಲದಿದ್ದರೆ ದಂಡ ಗ್ಯಾರಂಟಿ ಎಂದು ಹೇಳಲಾಗಿತ್ತಾದರೂ, ಈ ಕುರಿತ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ನಿಮ್ಮ ಹೆಲ್ಮೆಟ್ ನಲ್ಲಿ ಐ.ಎಸ್.ಐ. ಮಾರ್ಕ್ ಇರಲೇಬೇಕೆಂದಿಲ್ಲ. ಹಾಫ್ ಹೆಲ್ಮೆಟ್ ಧರಿಸಿದರೂ ಫೈನ್ ಹಾಕಲ್ಲ. ಆದರೆ, ಜೀವ ರಕ್ಷಣೆಯ ಉದ್ದೇಶದಿಂದ ಐ.ಎಸ್.ಐ. ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸಬೇಕೆಂದು ವಾಹನ ಸವಾರರಿಗೆ ಪೊಲೀಸರು ಸೂಚಿಸಲಿದ್ದಾರೆ.

ಹೆಲ್ಮೆಟ್ ನಲ್ಲಿರುವ ಐ.ಎಸ್.ಐ. ಮಾರ್ಕ್ ಅಸಲಿಯೇ, ನಕಲಿಯೇ ಎಂಬುದನ್ನು ತಪಾಸಣೆ ವೇಳೆ ಪರಿಶೀಲಿಸಲು ಸಾಧ್ಯವಿಲ್ಲದ ಕಾರಣ ಹಾಗೂ ಮಾನದಂಡಗಳು ಇಲ್ಲದ ಕಾರಣ ಕಡ್ಡಾಯ ನಿಯಮವನ್ನು ಕೈ ಬಿಡಲು ಚಿಂತಿಸಲಾಗಿದೆ.

ಐ.ಎಸ್.ಐ. ಮಾರ್ಕ್ ಹೆಲ್ಮೆಟ್ ಕಡ್ಡಾಯವೆಂದು ಹೇಳಿದ್ದರಿಂದ ನಕಲಿ ಹೆಲ್ಮೆಟ್ ಗಳಿಗೂ ಐ.ಎಸ್.ಐ. ಮಾರ್ಕ್ ಸ್ಟಿಕರ್ ಹಚ್ಚಿ ಮಾರಾಟ ಮಾಡುವ ಪ್ರಕರಣ ಬೆಳಕಿಗೆ ಬಂದಿದ್ದವು.

ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಹಾಫ್ ಹೆಲ್ಮೆಟ್, ಐ.ಎಸ್.ಐ. ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ಬಳಸುವ ಬದಲು, ಜೀವ ರಕ್ಷಣೆಗೆ ಸೂಕ್ತವಾದ ಗುಣಮಟ್ಟದ ಹೆಲ್ಮೆಟ್ ಬಳಸುವಂತೆ ವಾಹನ ಸವಾರರಿಗೆ ಸೂಚಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...