alex Certify
ಕನ್ನಡ ದುನಿಯಾ       Mobile App
       

Kannada Duniya

ದ್ವಿ ಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಹೆಲ್ಮೆಟ್ ಕಡ್ಡಾಯಗೊಳಿಸಿದ ಕಾರಣಕ್ಕೆ ಕಳಪೆ ಗುಣಮಟ್ಟದ ಅರ್ಧ ಹೆಲ್ಮೆಟ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.

ಐ.ಎಸ್.ಐ. ಮುದ್ರೆ ಇರುವ, ಫುಲ್ ಹೆಲ್ಮೆಟ್ ಗಳನ್ನೇ ಧರಿಸಬೇಕೆಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈಗಾಗಲೇ ಮೈಸೂರಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಅರ್ಧ ಟೋಪಿಯಾಕಾರದ ಹೆಲ್ಮೆಟ್ ಗಳನ್ನು ಬಳಸದೇ ಗುಣಮಟ್ಟದ ಐ.ಎಸ್.ಐ. ಮುದ್ರೆ ಇರುವ ಫುಲ್ ಹೆಲ್ಮೆಟ್ ಗಳನ್ನು ಬಳಸುವಂತೆ ಸೂಚಿಸಿದ್ದಾರೆ.

ಕಳಪೆ ಹೆಲ್ಮೆಟ್ ಧರಿಸುವ ವಾಹನ ಸವಾರರಿಗೆ ತಿಳಿವಳಿಕೆ ನೀಡಲು ಆಪರೇಷನ್ ಸೇಫ್ ರೈಡ್ ಹೆಸರಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಗುಣಮಟ್ಟದ ಹೆಲ್ಮೆಟ್ ಬಳಸುವಂತೆ ಮೈಸೂರು ಪೊಲೀಸರ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದಾರೆ.

ಐ.ಎಸ್.ಐ. ಅಥವಾ ಬಿ.ಐ.ಎಸ್. ಮುದ್ರೆ ಇರುವ ಫುಲ್ ಹೆಲ್ಮೆಟ್ ಗಳನ್ನೇ ಬಳಸುವಂತೆ ವಾಹನ ಸವಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಿದ್ದು, ಇದಕ್ಕಾಗಿ ಜನವರಿ 31 ರ ವರೆಗೆ ಅವಕಾಶ ನೀಡಲಾಗಿದೆ. ಫೆಬ್ರವರಿ 1 ರಿಂದ ಅರ್ಧ ಹೆಲ್ಮೆಟ್ ಹಾಕಿದ ವಾಹನ ಸವಾರರಿಗೆ ದಂಡ ಬೀಳುವುದಂತೂ ಗ್ಯಾರಂಟಿ.

ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಕಂಡ ಕಂಡ ಕಳಪೆ ಹೆಲ್ಮೆಟ್ ಖರೀದಿಸಿದವರು ಮತ್ತೆ ಹೆಲ್ಮೆಟ್ ಖರೀದಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...