alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ನಿಂದಾಗಿ ಅದಲು ಬದಲಾದ ಪತ್ನಿಯರು !

Helmets compulsary in Tamil Nadu from 1st july xBhp News

ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೆ ಬಂದಿದ್ದು, ದ್ವಿಚಕ್ರವಾಹನ ಚಾಲನೆ ಮಾಡುವವರ ಜೊತೆಗೆ ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಹೀಗೆ ಹೆಲ್ಮೆಟ್ ನಿಂದ ಉಂಟಾದ ಅವಾಂತರವೊಂದರ ಸ್ಟೋರಿ ಇಲ್ಲಿದೆ ನೋಡಿ.

ಅಂದ ಹಾಗೇ ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ. ಇಲ್ಲಿನ ಪೆಟ್ರೋಲ್ ಬಂಕ್ ಒಂದಕ್ಕೆ ಏಕಕಾಲಕ್ಕೆ ಎರಡು ಹೋಂಡಾ ಬೈಕ್ ಗಳು ಬಂದಿವೆ. ಇಬ್ಬರೂ ಸವಾರರು ತಮ್ಮ ಪತ್ನಿಯರ ಸಮೇತ ಅಲ್ಲಿಗೆ ಬಂದಿದ್ದು, ಅವರನ್ನು ಸ್ವಲ್ಪ ದೂರದಲ್ಲಿ ಇಳಿಸಿ, ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಮೊದಲು ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡಾತ ಸೀದಾ ಹೋಗಿ ಪತ್ನಿಯ ಬಳಿ ಗಾಡಿ ನಿಲ್ಲಿಸಿದ್ದಾನೆ. ಆಕೆಯೂ ಹಿಂದೆ ಮುಂದೆ ನೋಡದೇ ಗಾಡಿ ಹತ್ತಿದ್ದಾಳೆ.

ಹೆಲ್ಮೆಟ್ ಧರಿಸಿದ್ದರಿಂದ ಆಕೆಯೇ ತನ್ನ ಪತ್ನಿ ಹೌದೋ, ಅಲ್ಲವೋ ಎಂಬುದು ಅವನಿಗೂ ಗೊತ್ತಾಗಲಿಲ್ಲ. ಬೈಕ್ ಬೇರೆ ಕಡೆ ಹೊರಟಿದ್ದನ್ನು ಕಂಡ ಆಕೆ ಪ್ರಶ್ನಿಸಿದಾಗ, ಇವನಿಗೋ ಸಿಕ್ಕಾಪಟ್ಟೆ ದಿಗಿಲಾಗಿದೆ. ಸೀದಾ ವಾಪಸ್ ಪೆಟ್ರೋಲ್ ಬಂಕ್ ಗೆ ಬಂದರೆ ಅಲ್ಲಿ ತನ್ನ ಪತ್ನಿ ಹಾಗೂ ಪೇಚು ಮೋರೆ ಹಾಕಿ ನಿಂತಿದ್ದ ಆಕೆಯ ಗಂಡ ಕಂಡಿದ್ದಾರೆ. ಹೀಗೆ ಆಗಿದ್ದಕ್ಕೆ ಇಬ್ಬರೂ ದಂಪತಿಗಳ ನಡುವೆ ಸಣ್ಣ ಜಗಳವೂ ಆಗಿದೆ. ಅಂದಹಾಗೇ, ಇಬ್ಬರೂ ಮಹಿಳೆಯರು ಹೋಂಡಾ ಬೈಕ್ ನಲ್ಲಿ ಬಂದಿದ್ದರು. ಹೆಲ್ಮೆಟ್ ಧರಿಸಿದ್ದರಲ್ಲದೇ, ಒಂದೇ ಬಣ್ಣದ ಸೀರೆ ಕೂಡ ಉಟ್ಟಿದ್ದರು. ಹೀಗೆ ಯಡವಟ್ಟಾಗಲು ಹೆಲ್ಮೆಟ್ಟೇ ಕಾರಣ ಅಂದು ಅಲ್ಲಿದ್ದವರೆಲ್ಲಾ ನಸುನಕ್ಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...