alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಇಲ್ಲದ ಸವಾರರಿಗೆ ಶಾಕಿಂಗ್ ನ್ಯೂಸ್… !

ಧಾರವಾಡ –ಹುಬ್ಬಳ್ಳಿ ಅವಳಿ ನಗರದಲ್ಲಿ ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಾಲನೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಕೆಲವರಂತೂ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ತಾರೆ. ಇನ್ನು ಕೆಲವರು ದಂಡ ಕಟ್ತಾರೆ.

ಹೀಗೆ ಹೆಲ್ಮೆಟ್ ಇಲ್ಲದೇ ದ್ವಿಚಕ್ರವಾಹನ ಚಾಲನೆ ಮಾಡುವವರು ಇನ್ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಕಡ್ಡಾಯಗೊಳಿಸಿದ್ದರೂ, ಅವಳಿ ನಗರಗಳಲ್ಲಿ ಅನೇಕರು ಹೆಲ್ಮೆಟ್ ಬಳಸುತ್ತಿಲ್ಲ. ಈ ಕಾರಣದಿಂದ ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ಅಭಿಯಾನ ಆರಂಭಿಸಲು ಧಾರವಾಡ –ಹುಬ್ಬಳ್ಳಿ ಅವಳಿ ನಗರ ಪೊಲೀಸರು ಮುಂದಾಗಿದ್ದಾರೆ.

ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪೆಟ್ರೋಲ್ ಬಂಕ್ ಮಾಲೀಕರ ಸಭೆ ನಡೆಸಿ, ಹೆಲ್ಮೆಟ್ ಇಲ್ಲದೇ ಬರುವ ಸವಾರರಿಗೆ ಪೆಟ್ರೋಲ್ ಹಾಕದಂತೆ ತಿಳಿಸಲು ಯೋಜಿಸಿದ್ದಾರೆ. ಇನ್ನು ಹೊಸ ಬೈಕ್ ಖರೀದಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಖರೀದಿಸಿ ಬಳಸುವಂತೆ ಸೂಚನೆ ನೀಡಲು ಶೋ ರೂಂ ಮಾಲೀಕರಿಗೆ ತಿಳಿಸಲಾಗಿದೆ.

ಹಿಂದೆ ಕೋರ್ಟ್ ಆದೇಶದಂತೆ ಹೆಲ್ಮೆಟ್ ಕಡ್ಡಾಯ ಮಾಡಿದಾಗ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದರು. ವಿರೋಧ ವ್ಯಕ್ತವಾದ ಬಳಿಕ ಪೊಲೀಸರು ಮೃದು ಧೋರಣೆ ಅನುಸರಿಸಿದ್ದರು. ಆಗಾಗ ಹೆಲ್ಮೆಟ್ ಇಲ್ಲದ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದರು. ಮತ್ತೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವ ಪ್ರಕರಣ ಹೆಚ್ಚಾಗಿ ಅಪಘಾತಗಳಲ್ಲಿ ಗಾಯಗೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡಿದ ಪ್ರಕರಣ ಜಾಸ್ತಿಯಾಗಿದ್ದು, ಪೊಲೀಸರು, ಸುರಕ್ಷಿತ ಚಾಲನೆಗೆ ಸುರಕ್ಷಿತ ಹೆಲ್ಮೆಟ್ ಬಳಸುವಂತೆ ಜಾಗೃತಿ ಅಭಿಯಾನ ನಡೆಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ನೋ ಹೆಲ್ಮೆಟ್ ನೋ ಪೆಟ್ರೋಲ್ ಅಭಿಯಾನ ಕೈಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...