alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತೆ ಹಾಲಿಗೆ ಡಿಮ್ಯಾಂಡ್ ಯಾಕೆ ಗೊತ್ತಾ…?

ಇನ್ನು ಮುಂದೆ ಕೆಲಸಕ್ಕೆ ಬಾರದವರನ್ನು ಕತ್ತೆಗಳೆಂದು ಹೀಯಾಳಿಸುವಂತಿಲ್ಲ. ಕತ್ತೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂಬ ನಂಬಿಕೆಯಿಂದ ಈ ಹಾಲಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಪ್ರತಿ ಕತ್ತೆಯಿಂದ ದೊರೆಯುವ ಹಾಲಿನಿಂದ 500 ರೂ.ಗಳವರೆಗೆ ಸಂಪಾದನೆಯಾಗುತ್ತಿದೆ ಎನ್ನಲಾಗಿದೆ.

ಕತ್ತೆ ಹಾಲನ್ನು ಚಿಕ್ಕ ಮಕ್ಕಳಿಗೆ ಕುಡಿಸುವುದರಿಂದ ಬುದ್ದಿ ಚುರುಕಾಗುವುದೆಂಬ ನಂಬಿಕೆಯಿದೆಯಲ್ಲದೇ ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆಂಬ ಪ್ರತೀತಿಯಿದೆ. ಹೀಗಾಗಿ ಕತ್ತೆ ಹಾಲಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಕತ್ತೆ ಸಾಕಿದವರು ಹಾಲನ್ನು ಬಯಸಿದವರ ಮನೆ ಮುಂದೆಯೇ ಬಂದು ಹಿಂಡಿ ಕೊಡುತ್ತಾರೆ.

ಹಲವಾರು ಕುಟುಂಬಗಳು ಕತ್ತೆ ಹಾಲನ್ನು ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದು, ಕಾಮಾಲೆ ರೋಗ, ವಾಯು ರೋಗ, ಸಕ್ಕರೆ ಕಾಯಿಲೆ ಹೀಗೆ ವಿವಿಧ ಕಾಯಿಲೆಗಳಿಗೆ ಈ ಹಾಲು ರಾಮ ಬಾಣವೆಂದು ಹೇಳಲಾಗುತ್ತದೆ. ಈಗ ಕತ್ತೆ ಹಾಲಿಗೆ ಬೇಡಿಕೆ ಬಂದಿರುವುದರಿಂದ ಮುಂದೊಂದು ದಿನ ಇದು ಉದ್ಯಮದ ಸ್ವರೂಪ ಪಡೆದರೂ ಅಚ್ಚರಿಯಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...