alex Certify
ಕನ್ನಡ ದುನಿಯಾ       Mobile App
       

Kannada Duniya

ಖಾತೆ ಕೈತಪ್ಪಿದ ಆಕ್ರೋಶದಲ್ಲಿ ಮಾಧ್ಯಮದವರ ಮೇಲೆ ರೇಗಾಡಿದ್ರಾ ರೇವಣ್ಣ?

ಬುಧವಾರದಂದು ಮೈತ್ರಿ ಸರ್ಕಾರದ ನೂತನ ಸಚಿವರ ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿದೆ. ಆದರೆ ಸಚಿವಾಕಾಂಕ್ಷಿಗಳ ಒತ್ತಡ ತೀವ್ರವಾಗಿರುವ ಹಿನ್ನೆಲೆಯಲ್ಲಿ ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ಗೊಂದಲದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರುಗಳಿದ್ದಾರೆ.

ಕಾಂಗ್ರೆಸ್ ಭಾವೀ ಸಚಿವರುಗಳ ಪಟ್ಟಿ ಹೈಕಮಾಂಡ್ ಪರಿಶೀಲನೆಗಾಗಿ ದೆಹಲಿಗೆ ರವಾನೆಯಾಗಿದ್ದರೆ ಇತ್ತ ಜೆಡಿಎಸ್ ಸಚಿವರ ಪಟ್ಟಿ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರ ಪದ್ಮನಾಭನಗರ ನಿವಾಸದಲ್ಲಿ ಸಿದ್ಧವಾಗುತ್ತಿದೆ.

ಇಂದು ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ದೇವೇಗೌಡರ ನಿವಾಸದಲ್ಲಿ ನಡೆದಿದ್ದು, ಈ ಸಭೆಗೆ ಆಗಮಿಸಿದ ಶಾಸಕ ಹೆಚ್.ಡಿ. ರೇವಣ್ಣ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.

ಲೋಕೋಪಯೋಗಿ ಹಾಗೂ ಇಂಧನ ಖಾತೆ ತಮಗೇ ಬೇಕೆಂದು ಹೆಚ್.ಡಿ. ರೇವಣ್ಣ ಪಟ್ಟು ಹಿಡಿದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ರೇವಣ್ಣ, ಮನಸ್ಸಿಗೆ ಬಂದದ್ದನ್ನು ಬರೆದರೆ ನ್ಯಾಯಾಲಯಕ್ಕೆ ಎಳೆಯುವುದಾಗಿ ಧಮ್ಕಿ ಹಾಕಿದ್ದಾರೆ.

ಇಂಧನ ಖಾತೆ ವಾಪಾಸು ಪಡೆಯಲು ಕಾಂಗ್ರೆಸ್ ನಾಯಕರು ದೇವೇಗೌಡರೊಂದಿಗೆ ಮಾತನಾಡಿದ್ದರೆನ್ನಲಾಗಿದ್ದು, ಇದಕ್ಕೆ ಸಮ್ಮತಿ ಸೂಚಿಸಿರುವ ದೇವೇಗೌಡರು ಹೆಚ್.ಡಿ. ರೇವಣ್ಣನವರ ಮನವೊಲಿಸಿದ್ದು, ಒಲ್ಲದ ಮನಸ್ಸಿನಿಂದಲೇ ಇದಕ್ಕೆ ಒಪ್ಪಿಕೊಂಡಿರುವ ರೇವಣ್ಣ ಆ ಸಿಟ್ಟನ್ನು ಮಾಧ್ಯಮಗಳ ವಿರುದ್ಧ ತೋರಿಸಿಕೊಂಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...