alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಕೈಯಲ್ಲಿದೆ ವಜ್ರ ಖಚಿತ ವಾಚ್ !

watch cm

ಬೆಂಗಳೂರು: ಕಳೆದ ವಾರದಿಂದ ರಾಜ್ಯದಲ್ಲಿ ವಾಚ್ ಪಾಲಿಟಿಕ್ಸ್ ಜೋರಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದುಬಾರಿ ಬೆಲೆಯ ವಾಚ್ ಕಟ್ಟುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಅಲ್ಲದೇ, ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.

ಕುಮಾರಸ್ವಾಮಿ ಹೇಳಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದ ಸಿದ್ಧರಾಮಯ್ಯ, ತಮ್ಮ ವಾಚ್, ಕನ್ನಡಕದ ಬೆಲೆ ಅಷ್ಟೊಂದು ದುಬಾರಿಯಾಗಿದ್ದರೆ, ಕುಮಾರಸ್ವಾಮಿಯೇ ಅವನ್ನು ಕೊಂಡುಕೊಳ್ಳಲಿ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ಅವರ ವಾಚ್, ಕನ್ನಡಕ ಖರೀದಿಸಲು ಸೆಕೆಂಡ್ ಹ್ಯಾಂಡ್ ಗಿರಾಕಿಯಲ್ಲ ಎಂದು ಹೇಳಿದ್ದರು. ಹೀಗೆ ರಾಜ್ಯದಲ್ಲಿ ದುಬಾರಿ ಬೆಲೆಯ ವಾಚ್ ವಾಕ್ಸಮರ ನಡೆಯುತ್ತಿರುವಾಗಲೇ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಸಿದ್ದರಾಮಯ್ಯ ವಜ್ರಖಚಿತವಾದ ಸುಮಾರು 70 ಲಕ್ಷ ರೂ. ಬೆಲೆಯ ವಾಚ್ ಕಟ್ಟುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿಡಿಯೋ ಕ್ಲಿಪ್ಪಿಂಗ್ ಬಿಡುಗಡೆ ಮಾಡಿದ್ದಾರೆ. ದುಬೈನಲ್ಲಿ ಈ ವಾಚ್ ಗೆ 70 ಲಕ್ಷ ರೂ. ಬೆಲೆ ಇದೆ. ವಾಚ್ ಕಂಪನಿ ನೀಡಿರುವ ಮಾಹಿತಿ ಆಧರಿಸಿಯೇ ಈ ಹೇಳಿಕೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ದುಬಾರಿ ವಾಚ್ ಈಗ ಸಿಕ್ಕಾಪಟ್ಟೆ ಚರ್ಚಿತ ವಿಷಯವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...